ಇಂದು ನೀರಿನ ಅದಾಲತ್‌

7

ಇಂದು ನೀರಿನ ಅದಾಲತ್‌

Published:
Updated:
ಇಂದು ನೀರಿನ ಅದಾಲತ್‌

ಬೆಂಗಳೂರು: ಬೆಂಗಳೂರು ಜಲಮಂಡಳಿಯು ಇದೇ  20ರಂದು (ಮಂಗಳವಾರ) ಬೆಳಿಗ್ಗೆ 9.30 ರಿಂದ 11ರವರೆಗೆ ಪಶ್ಚಿಮ-3, ಆಗ್ನೇಯ-3 ಮತ್ತು ನೈರುತ್ಯ-3 ಉಪವಿಭಾಗಗಳಲ್ಲಿ ನೀರಿನ ಅದಾಲತ್‌ ಆಯೋಜಿಸಿದೆ.

ನೀರಿನ ಬಿಲ್, ನೀರು ಮತ್ತು ಒಳಚರಂಡಿ ಸಂಪರ್ಕ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳ ಬಗ್ಗೆ  ಅದಾಲತ್‍ನಲ್ಲಿ ಪರಿಹಾರ ಪಡೆಯಬಹುದು.

ಪಶ್ಚಿಮ-3 ಉಪ ವಿಭಾಗ ವ್ಯಾಪ್ತಿಯ ಕೆಂಗೇರಿ, ಐಡಿಯಲ್ ಹೋಂ, ಬಿಇಎಂಎಲ್ ಲೇಔಟ್, ಆರ್.ಆರ್.ನಗರ ಸೇವಾ ಠಾಣೆ ವ್ಯಾಪ್ತಿಯ ಕುಂದುಕೊರತೆಗಳನ್ನು ಆರ್.ಆರ್.ನಗರದ ಬಿಇಎಂಎಲ್ ಬಡಾವಣೆ 5ನೇ ಹಂತದ ಡಬಲ್ ರೋಡ್‌ನಲ್ಲಿರುವ ಉಪವಿಭಾಗ ಕಚೇರಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಬಗೆಹರಿಸಲಿದ್ದಾರೆ.

ಸಂಪರ್ಕ: ಕಾರ್ಯನಿರ್ವಾಹಕ ಎಂಜಿನಿಯರ್‌ (ಪಶ್ಚಿಮ) 22945171, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌: 28611826.

ಆಗ್ನೇಯ-3 ಉಪ ವಿಭಾಗ ವ್ಯಾಪ್ತಿಯ ಕೋರಮಂಗಲ- 1 ಮತ್ತು 2, ಬೆಳ್ಳಂದೂರು ಸೇವಾ ಠಾಣೆ ವ್ಯಾಪ್ತಿಯ ಕುಂದುಕೊರತೆಗಳನ್ನು ಕೋರಮಂಗಲದ 3ನೇ ಬ್ಲಾಕ್‌ನ 2ನೇ ಅಡ್ಡ ರಸ್ತೆಯಲ್ಲಿರುವ ಉಪವಿಭಾಗ ಕಚೇರಿಯಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಬಗೆಹರಿಸಲಿದ್ದಾರೆ.

ಸಂಪರ್ಕ: ಕಾರ್ಯನಿರ್ವಾಹಕ ಎಂಜಿನಿಯರ್‌ (ಆಗ್ನೇಯ–2) 22945389 ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಆಗ್ನೇಯ-3)   22945243.

ನೈರುತ್ಯ-3 ಉಪ ವಿಭಾಗದ ಎಂ.ಎನ್.ಕೆ ಪಾರ್ಕ್, ಮೌಂಟ್ ಜಾಯ್, ನಾಗೇಂದ್ರ ಬ್ಲಾಕ್, ಗಿರಿನಗರ ಮತ್ತು (ಕತ್ರಿಗುಪ್ಪೆ) ಸೇವಾ ಠಾಣೆ ವ್ಯಾಪ್ತಿಯ ಕುಂದುಕೊರತೆಗಳನ್ನು ಬಸವನಗುಡಿಯ ಎಂ.ಎನ್.ಕೆ ಪಾರ್ಕ್‌ನಲ್ಲಿರುವ ಉಪವಿಭಾಗ ಕಚೇರಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಬಗೆಹರಿಸಲಿದ್ದಾರೆ. ಸಂಪರ್ಕ: ಕಾರ್ಯನಿರ್ವಾಹಕ ಎಂಜಿನಿಯರ್‌ (ನೈರುತ್ಯ)   22945196 ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ನೈರುತ್ಯ-3) ದೂ.22945155.

ಮಂಡಳಿಯ 24X7 ದೂರು ನಿರ್ವಹಣಾ ಕೇಂದ್ರದ ದೂರವಾಣಿ -22238888, ಸಹಾಯವಾಣಿ 1916 ಹಾಗೂ ವಾಟ್ಸ್‌ಆ್ಯಪ್‌ ಸಂಖ್ಯೆ- 8762228888 ಸಂಪರ್ಕಿಸಬಹುದು ಎಂದು ಜಲಮಂಡಳಿ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry