ಯುವಕನ ಶವ ಪತ್ತೆ

7

ಯುವಕನ ಶವ ಪತ್ತೆ

Published:
Updated:

ಬೆಂಗಳೂರು: ಚಂದ್ರಾಲೇಔಟ್‌ ಬಳಿಯ ಅತ್ತಿಗುಪ್ಪೆಯ 14ನೇ ಮುಖ್ಯರಸ್ತೆಯಲ್ಲಿ ರಾಜು (26) ಎಂಬಾತನ ಶವ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.

ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಶವ ಬಿಸಾಕಿ ಹೋಗಿರುವ ಅನುಮಾನವಿದೆ ಎಂದು ಪೊಲೀಸರು ತಿಳಿಸಿದರು.

ಶವವನ್ನು ಬೆಳಿಗ್ಗೆ ನೋಡಿದ್ದ ಸ್ಥಳೀಯ ನಿವಾಸಿಯೊಬ್ಬರು ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಶವವನ್ನು ಆಸ್ಪತ್ರೆಗೆ ಸಾಗಿಸಿದೆವು. ಮೃತನ ಬಳಿ ಸಿಕ್ಕಿರುವ ಗುರುತಿನ ಚೀಟಿಯಿಂದ ಹೆಸರು ಮಾತ್ರ ಗೊತ್ತಾಗಿದೆ. ಪೂರ್ವಾಪರ ತಿಳಿದುಕೊಳ್ಳುತ್ತಿದ್ದೇವೆ. ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದೇವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry