ಯುವತಿ ಸಾವು: ವರದಕ್ಷಿಣೆಗಾಗಿ ಕೊಲೆ ಆರೋಪ

7

ಯುವತಿ ಸಾವು: ವರದಕ್ಷಿಣೆಗಾಗಿ ಕೊಲೆ ಆರೋಪ

Published:
Updated:

ಹೊಸಕೋಟೆ: ತಾಲ್ಲೂಕಿನ ಕೊಳತೂರು ಗ್ರಾಮದ ಗಂಗೋತ್ರಿ (26) ಎಂಬುವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಗ್ರಾಮದ ಮಂಜುನಾಥ್ ಎಂಬುವರ ಜತೆ ನಾಲ್ಕು ವರ್ಷಗಳ ಹಿಂದೆ ಗಂಗೋತ್ರಿ ವಿವಾಹವಾಗಿದ್ದರು. ದಂಪತಿಗೆ ಎರಡು ವರ್ಷದ ಮಗ ಇದ್ದಾನೆ.

ಮದುವೆ ವೇಳೆ ₹ 50 ಸಾವಿರ ಹಾಗೂ 250 ಗ್ರಾಂ ಚಿನ್ನದ ಒಡವೆಯನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ಆದರೂ, ವರದಕ್ಷಿಣೆಗಾಗಿ ಪತಿ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು. ಅದಕ್ಕೆ ನಿರಾಕರಿಸಿದ್ದರಿಂದ ಮಗಳನ್ನು ನೇಣು ಹಾಕಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಗಂಗೋತ್ರಿ ತಂದೆ ತಿಪ್ಪಾರೆಡ್ಡಿ ದೂರು ಕೊಟ್ಟಿದ್ದಾರೆ.

ಈ ಸಂಬಂಧ ಮಂಜುನಾಥ ಹಾಗೂ ಆತನ ಅಣ್ಣ ನಾಗಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹೊಸಕೋಟೆ ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry