ಹರ್ಮಲ್‌ ಶ್ರೇಣಿಯ ಕೈಗಡಿಯಾರ ಬಿಡುಗಡೆ

7

ಹರ್ಮಲ್‌ ಶ್ರೇಣಿಯ ಕೈಗಡಿಯಾರ ಬಿಡುಗಡೆ

Published:
Updated:
ಹರ್ಮಲ್‌ ಶ್ರೇಣಿಯ ಕೈಗಡಿಯಾರ ಬಿಡುಗಡೆ

ಬೆಂಗಳೂರು: ಜರ್ಮನಿಯ ಗಡಿಯಾರ ತಯಾರಕ ಕಂಪನಿ ಹರ್ಮಲ್‌, ತನ್ನ ಉತ್ಪನ್ನಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

‘ವೈವಿಧ್ಯಮಯ ಟೇಬಲ್ ಕ್ಲಾಕ್‍, ಗೋಡೆ ಗಡಿಯಾರಗಳನ್ನು ಪರಿಚಯಿಸಲಾಗಿದೆ. ಭಾರತದಲ್ಲಿ ಗಡಿಯಾರಗಳ ವಿಲಾಸಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಲು ಉದ್ದೇಶಿಸಲಾಗಿದೆ.

‘ಜರ್ಮನಿಯ ನಿಖರ ಎಂಜಿನಿಯರಿಂಗ್ ತಂತ್ರಜ್ಞಾನಕ್ಕೆ ಹರ್ಮಲ್‌ ಇನ್ನೊಂದು ಹೆಸರಾಗಿದೆ. ಈ ಗಡಿಯಾರಗಳ ಬಗ್ಗೆ ಭಾರತದಲ್ಲಿ ಆಸಕ್ತಿ ಹೆಚ್ಚಾಗುತ್ತಿರುವುದರಿಂದ ಉತ್ತಮ ಸಂಖ್ಯೆಯ ಮಾರಾಟ ನಿರೀಕ್ಷಿದ್ದೇವೆ’ ಎಂದು ಸಂಸ್ಥೆಯ ಅಂತರರಾಷ್ಟ್ರೀಯ ಮಾರಾಟ ನಿರ್ದೇಶಕ ಜೆನ್ಸ್ ಕ್ವಾಯೆಕ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಹರ್ಮಲ್‌, ಈ ಗಡಿಯಾರಗಳ ಶ್ರೇಣಿಯನ್ನು ಸ್ಕೈಲಾರ್ಕ್ ಟ್ರೇಡಿಂಗ್ ಕಂಪನಿಯ ಸಹಯೋಗದಲ್ಲಿ ವಿತರಿಸುತ್ತದೆ. ಈ ಗಡಿಯಾರಗಳ ಬೆಲೆ ₹ 20 ಸಾವಿರದಿಂದ ₹ 2 ಲಕ್ಷದವರೆಗೆ ಇದೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry