ಇವಾನೊವಿಚ್‌ಗೆ ಗಂಡು ಮಗು

7

ಇವಾನೊವಿಚ್‌ಗೆ ಗಂಡು ಮಗು

Published:
Updated:
ಇವಾನೊವಿಚ್‌ಗೆ ಗಂಡು ಮಗು

ಬರ್ಲಿನ್‌: ಸರ್ಬಿಯಾದ ಟೆನಿಸ್‌ ಆಟಗಾರ್ತಿ ಅನಾ ಇವಾನೊವಿಚ್‌ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಈ ವಿಷಯವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

2008ರಲ್ಲಿ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಇವಾನೊವಿಚ್‌ 2016ರಲ್ಲಿ ಜರ್ಮನಿಯ ಫುಟ್‌ಬಾಲ್‌ ಆಟಗಾರ ಬಾಸ್ಟಿಯನ್‌ ಶ್ವೇನ್‌ಸ್ಟೀಗರ್‌ ಅವರನ್ನು ವಿವಾಹವಾಗಿದ್ದರು.

‘ಹೊಸ ಪ್ರಪಂಚಕ್ಕೆ ಕಾಲಿಟ್ಟಿರುವ ನನ್ನ ‍ಪುಟ್ಟ ಕಂದನಿಗೆ ಸ್ವಾಗತ. ನಿನ್ನ ಆಗಮನದಿಂದ ಸಂಭ್ರಮ ಮನೆಮಾಡಿದೆ’ ಎಂದು ಬಾಸ್ಟಿಯನ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

‘ನಮಗೆ ಈಗಾಗುತ್ತಿರುವ ಖುಷಿ, ವರ್ಣನೆಗೆ ನಿಲುಕದ್ದು’ ಎಂದು ಅನಾ ಖುಷಿ ವ್ಯಕ್ತಪಡಿಸಿದ್ದಾರೆ.

ಅನಾ ಮತ್ತು ಬಾಸ್ಟಿಯನ್‌ ದಂಪತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry