ರಾಷ್ಟ್ರೀಯ ತೋಟಗಾರಿಕೆ ಮೇಳ ಸಂಪನ್ನ

7

ರಾಷ್ಟ್ರೀಯ ತೋಟಗಾರಿಕೆ ಮೇಳ ಸಂಪನ್ನ

Published:
Updated:

ಬೆಂಗಳೂರು: ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು ಆಯೋಜಿಸಿರುವ ರಾಷ್ಟ್ರೀಯ ತೋಟಗಾರಿಕೆ ಮೇಳ ಸಂಪನ್ನಗೊಂಡಿತು.

ರೈತರು ಗಿಡಮೂಲಿಕೆಗಳು, ವಿವಿಧ ಪಾನೀಯಗಳು, ಅಣಬೆ, ಹೂವಿನ ಸಸ್ಯಗಳು, ಗಜಗಾತ್ರದ ಸೀಬೆಹಣ್ಣು, ಬೀಜರಹಿತ ನಿಂಬೆಹಣ್ಣು, ತುಡುವೆ ಜೇನು ಸಾಕಣೆ ಕುರಿತು ಮಾಹಿತಿ ಪಡೆದರು.

ದಾವಣಗೆರೆಯ ರೈತ ಕರಿಬಸಪ್ಪ ಕಂಡುಹಿಡಿದ ಕೀಟನಾಶಕ, ದಕ್ಷಿಣ ಆಫ್ರಿಕಾದ ಬೋರೋಮನ್ ತೆಂಗಿನಕಾಯಿ, ಕರಿ ಜೀರಿಗೆ.. ಹೀಗೆ ವೈವಿಧ್ಯಮಯ ತಳಿಗಳಿಗೆ ರೈತರು ಮಾರುಹೋದರು.

‘ನಮ್ಮಲ್ಲಿ ತಂತ್ರಜ್ಞಾನದಲ್ಲಿ ಕೊರತೆ ಇಲ್ಲ. ಆದರೆ, ಅವುಗಳನ್ನು ರೈತರಿಗೆ ತಲುಪಿಸುತ್ತಿಲ್ಲ. ಭವಿಷ್ಯದಲ್ಲಿ ಎದುರಾಗುವ ನೀರಿನ ಕೊರತೆಯನ್ನು ನಿಭಾಯಿಸುವುದು ನಮ್ಮ ಮುಂದಿರುವ ದೊಡ್ಡ ಸವಾಲು. ಕೆ.ಜಿ. ಅಕ್ಕಿ ಬೆಳೆಯಲು ₹5,000 ಲೀಟರ್ ನೀರು ಬಳಸಲಾಗುತ್ತಿದೆ’ ಎಂದು ವಿಶ್ರಾಂತ ಕುಲಪತಿ ನಾರಾಯಣಗೌಡ ಹೇಳಿದರು.

ಸಂಸ್ಥೆಯ ನಿರ್ದೇಶಕ ಎಂ.ಆರ್.ದಿನೇಶ್, ‘ಮೂರು ದಿನಗಳ ಮೇಳದಲ್ಲಿ 15 ಸಾವಿರ ರೈತರು ಭಾಗವಹಿಸಿದ್ದರು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry