ಕಾಮನ್‌ವೆಲ್ತ್ ಕೂಟ ನೋಡಲಿರುವ ಉಸೇನ್ ಬೋಲ್ಟ್‌

7

ಕಾಮನ್‌ವೆಲ್ತ್ ಕೂಟ ನೋಡಲಿರುವ ಉಸೇನ್ ಬೋಲ್ಟ್‌

Published:
Updated:
ಕಾಮನ್‌ವೆಲ್ತ್ ಕೂಟ ನೋಡಲಿರುವ ಉಸೇನ್ ಬೋಲ್ಟ್‌

ಸಿಡ್ನಿ: ಜಮೈಕಾದ ಅಥ್ಲೀಟ್ ಉಸೇನ್ ಬೋಲ್ಟ್‌ ಮುಂದಿನ ತಿಂಗಳು ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಲಿ ನಡೆಯುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ವೀಕ್ಷಕರಾಗಿ ಪಾಲ್ಗೊಳ್ಳಲಿದ್ದಾರೆ.

‘ಬೋಲ್ಟ್‌ 100ಮೀಟರ್ಸ್‌ ಓಟದ ಅಂತಿಮ ಸುತ್ತು ನೋಡಲಿದ್ದಾರೆ’ ಎಂದು ಜಮೈಕಾದ ಅಥ್ಲೀಟ್‌ ಯೋಹನ್ ಬ್ಲೇಕ್ ಹೇಳಿದ್ದಾರೆ. ಭಾನುವಾರ ಬ್ಲೇಕ್ ಅವರು ಆಸ್ಟ್ರೇಲಿಯಾಕ್ಕೆ ಬಂದಿಳಿದಿದ್ದಾರೆ.

ಆಗಸ್ಟ್ ತಿಂಗಳಿನಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ ಬಳಿಕ ಬೋಲ್ಟ್‌ ಅಥ್ಲೆಟಿಕ್ಸ್‌ಗೆ ವಿದಾಯ ಹೇಳಿದ್ದಾರೆ. 31 ವರ್ಷದ ಬೋಲ್ಟ್‌ ಆಸ್ಟ್ರೇಲಿಯಾದ ಕ್ರಿಕೆಟಿಗರಿಗೆ ವಿಕೆಟ್ ನಡುವೆ ಓಡುವ ತರಬೇತಿಯನ್ನು ನೀಡುತ್ತಿದ್ದಾರೆ.

100 ಮತ್ತು 200ಮೀಟರ್ಸ್ ಓಟದ ವಿಭಾಗಗಳಲ್ಲಿ ಬೋಲ್ಟ್‌ ವಿಶ್ವ ದಾಖಲೆ ಹೊಂದಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಎಂಟು ಬಾರಿ ಚಾಂಪಿಯನ್ ಆಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry