ರಸ್ತೆ ನಿಯಮ ಉಲ್ಲಂಘನೆ ಸವಾರರಿಗೆ ಯುವತಿ ಪಾಠ

7

ರಸ್ತೆ ನಿಯಮ ಉಲ್ಲಂಘನೆ ಸವಾರರಿಗೆ ಯುವತಿ ಪಾಠ

Published:
Updated:

ಬೆಂಗಳೂರು: ಪಾದಚಾರಿ ಮಾರ್ಗದಲ್ಲಿ ಬೈಕ್ ಓಡಿಸಿದ್ದಕ್ಕೆ ಯುವತಿ ಆಕ್ಷೇಪ ವ್ಯಕ್ತಪಡಿಸಿ, ಸವಾರರಿಗೆ ರಸ್ತೆ ನಿಯಮದ ಪಾಠ ಹೇಳುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕಾರ್ಪೊರೇಷನ್ ವೃತ್ತದ ಬಳಿಯ ಪಾದಚಾರಿ ಮಾರ್ಗದಲ್ಲಿ ವಾಹನಗಳು ಸಂಚರಿಸದಂತೆ ಸಿಮೆಂಟ್ ಇಟ್ಟಿಗೆಗಳನ್ನು ಅಡ್ಡ ಇಡಲಾಗಿತ್ತು. ಅದನ್ನು ಲೆಕ್ಕಿಸದ ಸವಾರರು ಇಟ್ಟಿಗೆಗಳ ಮೇಲೆ ಬೈಕ್ ಹತ್ತಿಸಿಕೊಂಡು ಹೋಗುತ್ತಿದ್ದರು. ಇದರಿಂದ ಪಾದಚಾರಿಗಳಿಗೆ ಓಡಾಟಕ್ಕೆ ತೊಂದರೆಯಾಗಿತ್ತು. ಅದನ್ನು ಗಮನಿಸಿದ ಮಂಜು ಥಾಮಸ್ ಎಂಬ ಯುವತಿ ಬೈಕ್‌ನ ಸವಾರರನ್ನು ಅಡ್ಡಗಟ್ಟಿ ವಿರೋಧ ವ್ಯಕ್ತಪಡಿಸಿದರು.  ಸವಾರರೂ ಯುವತಿ ಜತೆ ವಾಗ್ವಾದಕ್ಕೆ ಇಳಿದಿದ್ದರು. ಆಗ ಸಾರ್ವಜನಿಕರು ಯುವತಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ರಸ್ತೆ ನಿಯಮ ಉಲ್ಲಂಘಿಸುವವರಿಗೆ ನಿಮಯಗಳ ಬಗ್ಗೆ ತಿಳಿ ಹೇಳುವುದನ್ನೇ ಅವರು ಹವ್ಯಾಸ ಮಾಡಿಕೊಂಡಿದ್ದಾರೆ. ಯುವತಿ ಪರವಾಗಿ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ ಕೂಡಲೇ ಸವಾರ ಬೈಕ್‌ನನ್ನು ರಸ್ತೆಗೆ ಇಳಿಸಿಕೊಂಡು ಹೋದರು. ಈ ಘಟನೆಯ ಸಂಪೂರ್ಣ ದೃಶ್ಯವನ್ನು ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry