7

ರೈಲ್ವೆ ಇಲಾಖೆಯ ಉದ್ಯೋಗ ನೇಮಕಾತಿಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ: ರೈಲು ಸಂಚಾರ ಅಸ್ತವ್ಯಸ್ತ

Published:
Updated:
ರೈಲ್ವೆ ಇಲಾಖೆಯ ಉದ್ಯೋಗ ನೇಮಕಾತಿಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ: ರೈಲು ಸಂಚಾರ ಅಸ್ತವ್ಯಸ್ತ

ಮುಂಬೈ: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ನೇಮಕಾತಿಯಲ್ಲಿನ ಅವ್ಯವಸ್ಥೆ ಪ್ರಶ್ನಿಸಿ ವಿದ್ಯಾರ್ಥಿಗಳು ರೈಲು–ರುಕೋ ಪ್ರತಿಭಟನೆ ಕೈಗೊಂಡಿದ್ದು, ರೈಲು ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಮಾತುಂಗ ಹಾಗೂ ದಾದರ್ ನಡುವಿನ ರೈಲ್ವೆ ಹಳಿ ಮೇಲೆ ಪ್ರತಿಭಟನೆ ಕೈಗೊಂಡಿರುವ ಸುಮಾರು 500 ವಿದ್ಯಾರ್ಥಿಗಳು ರೈಲ್ವೆ ಇಲಾಖೆಯ ಉದ್ಯೋಗ ನೇಮಕಾತಿಯ ಬೇಡಿಕೆ ಇಟ್ಟಿದ್ದಾರೆ.

ಪ್ರತಿಭಟನೆಯಿಂದ ದಾದರ್ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ನಡುವಿನ ರೈಲು ಸಂಚಾರಕ್ಕೆ ತೊಂದರೆಯಾಗಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ಹೇಳಿದೆ.

ಅಲ್ಲದೇ ದಾದರ್ ಹಾಗೂ ಕುರ್ಲಾ ನಡುವಿನ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ.

ಎರಡು ಅಥವಾ ಮೂರು ದಿನಗಳೊಳಗೆ ಸಭೆ ಕರೆದು ಈ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದಾಗಿ ಪ್ರತಿಭಟನಾಕಾರರಿಗೆ ರೈಲ್ವೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry