ಶಿಥಿಲಗೊಂಡ ಓವರ್‌ಹೆಡ್‌ ಟ್ಯಾಂಕ್‌

5

ಶಿಥಿಲಗೊಂಡ ಓವರ್‌ಹೆಡ್‌ ಟ್ಯಾಂಕ್‌

Published:
Updated:
ಶಿಥಿಲಗೊಂಡ ಓವರ್‌ಹೆಡ್‌ ಟ್ಯಾಂಕ್‌

ಸಂತೇಮರಹಳ್ಳಿ: ಸಮೀಪದ ಕಾವುದವಾಡಿ ಗ್ರಾಮದಲ್ಲಿರುವ ಓವರ್‌ಹೆಡ್ ಟ್ಯಾಂಕ್ ಶಿಥಿಲಾವಸ್ಥೆ ತಲುಪಿದ್ದು, ಯಾವ ಸಮಯದಲ್ಲಾದರೂ ಕುಸಿಯುವ ಸಾಧ್ಯತೆ ಇದೆ.

ಟ್ಯಾಂಕ್‌ನ ಗಾರೆ ಉದುರುತ್ತಿದೆ. ಇದರಿಂದಾಗಿ ದಾರಿ ಹೋಕರು ಭಯದಿಂದ ತಿರುಗಾಡುವಂತಾಗಿದೆ. ಅಕ್ಕ ಪಕ್ಕದ ನಿವಾಸಿಗಳು ಆತಂಕದಲ್ಲಿ ದಿನದೂಡುತ್ತಿದ್ದಾರೆ.

‘ಟ್ಯಾಂಕ್ ತೆರವುಗೊಳಿಸಿ ಎಂದು ನಿವಾಸಿಗಳು ಸಂಬಂಧಪಟ್ಟವರಿಗೆ ಮನವಿ ಮಾಡಿಕೊಂಡಿದ್ದರೂ ಪ್ರಯೋಜನ ವಾಗಿಲ್ಲ. ಮುಂದಾಗಬಹುದಾದ ಅಪಾಯವನ್ನು ತಪ್ಪಿಸಲು ಓವರ್‌ಹೆಡ್ ಟ್ಯಾಂಕ್‌ನ್ನು ತೆರವುಗೊಳಿಸಬೇಕು’ ಎಂದು ಸ್ಥಳೀಯರಾದ ಮಹದೇವಸ್ವಾಮಿ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry