ಭಾರತದಲ್ಲಿ ರ‍್ಯಾಗಿಂಗ್ ಪ್ರಮಾಣ ಶೇ 75ರಷ್ಟು ಹೆಚ್ಚಳ

7

ಭಾರತದಲ್ಲಿ ರ‍್ಯಾಗಿಂಗ್ ಪ್ರಮಾಣ ಶೇ 75ರಷ್ಟು ಹೆಚ್ಚಳ

Published:
Updated:
ಭಾರತದಲ್ಲಿ ರ‍್ಯಾಗಿಂಗ್ ಪ್ರಮಾಣ ಶೇ 75ರಷ್ಟು ಹೆಚ್ಚಳ

ನವದೆಹಲಿ: ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ‌ರ‍್ಯಾಗಿಂಗ್ ಪ್ರಮಾಣ ಶೇ 75 ರಷ್ಟು ಹೆಚ್ಚಾಗಿದೆ ಎಂದು ವರದಿಯೊಂದು ಹೇಳಿದೆ.

2017ರಲ್ಲಿ ಕರ್ನಾಟಕದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ರ‍್ಯಾಗಿಂಗ್ ಪ್ರಮಾಣ ದುಪ್ಪಟ್ಟುಗೊಂಡಿದ್ದು, 49 ಪ್ರಕರಣಗಳು ದಾಖಲಾಗಿವೆ. 2016ರಲ್ಲಿ 24 ಪ್ರಕರಣಗಳು ದಾಖಲಾಗಿದ್ದವು.

ಇನ್ನು ಬಿಹಾರ, ಮಧ್ಯಪ್ರದೇಶ, ಉತ್ತರಖಂಡ ರಾಜ್ಯಗಳಲ್ಲಿ ದುಪ್ಪಟ್ಟಾಗಿದ್ದು, ಗುಜರಾತ್ ಮತ್ತು ಅಸ್ಸಾಂ ರಾಜ್ಯದಲ್ಲಿ ಮೂರು ಪಟ್ಟು ಹೆಚ್ಚಳ ಕಂಡಿದೆ. 

ಕೇಂದ್ರ ಸರ್ಕಾರದ ಲೆಕ್ಕಾಚಾರದ ಪ್ರಕಾರ, 2017ರಲ್ಲಿ ಭಾರತದಲ್ಲಿನ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳು ಸೇರಿದಂತೆ ಒಟ್ಟು 901 ರ‍್ಯಾಗಿಂಗ್ ಪ್ರಕರಣಗಳು ದಾಖಲಾಗಿವೆ. 2016ರಲ್ಲಿ 515 ಪ್ರಕರಣಗಳು ದಾಖಲಾಗಿತ್ತು.

ಗುಜರಾತ್ 16 (2016–5), ಅಸ್ಸಾಂ 33 (2016 –10), ಪಶ್ಚಿಮ ಬಂಗಾಳ 99 (2016–50), ಉತ್ತರಪ್ರದೇಶ 143 (2016–93), ಮಧ್ಯಪ್ರದೇಶ 100 (2016–55), ಬಿಹಾರ 53(2016–24), ಮಹಾರಾಷ್ಟ್ರ 46 (2016–29), ಒಡಿಸ್ಸಾ 46 (2016–28), ರಾಜಸ್ತಾನ 40 (2016–20), ದೆಹಲಿ 13 (2016–8), ಕೇರಳ 45(2016–35)ಪ್ರಕರಣಗಳು ದಾಖಲಾಗಿದೆ.

ಪ್ರತಿ ಜಿಲ್ಲೆಗಳಲ್ಲೂ ಯುಜಿಸಿ ನಿಯಾಮಾನುಸಾರ ರ‍್ಯಾಗಿಂಗ್ ನಿಗ್ರಹ ಸಮಿತಿ ರಚನೆ ಮಾಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry