ಶಶಿಕಲಾಗೆ 15 ದಿನಗಳ ಪೆರೋಲ್

7

ಶಶಿಕಲಾಗೆ 15 ದಿನಗಳ ಪೆರೋಲ್

Published:
Updated:
ಶಶಿಕಲಾಗೆ 15 ದಿನಗಳ ಪೆರೋಲ್

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ವಿ.ಕೆ.ಶಶಿಕಲಾ ನಟರಾಜ್‌ ತಮ್ಮ ಪತಿ ನಟರಾಜನ್ ಮಾರುತಪ್ಪ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವ ಸಲುವಾಗಿ 15 ದಿನಗಳ ಪೆರೋಲ್ ಮಂಜೂರು ಮಾಡಲಾಗಿದೆ.

ವಿ.ಕೆ ಶಶಿಕಲಾ ಅವರು ತಂಜಾವೂರಿನಲ್ಲಿ ನಡೆಯುವ ನಟರಾಜನ್ ಮಾರುತಪ್ಪ ಅವರ ಅಂತ್ಯಸಂಸ್ಕಾರಕ್ಕೆಂದು ಪರಪ್ಪನ ಅಗ್ರಹಾರ ಜೈಲಿನಿಂದ ತೆರಳಿರುವುದಾಗಿ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ನಟರಾಜನ್ ಮಾರುತಪ್ಪ(75) ಸೋಮವಾರ ತಡರಾತ್ರಿ 1.35ರ ವೇಳೆಯಲ್ಲಿ ಚೆನ್ನೈನ ಗ್ಲೆನೆಗಲ್ಸ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಹೃದಯ ಸಂಬಂಧಿ ಸೋಂಕಿಗೆ ಒಳಗಾಗಿದ್ದ ನಟರಾಜನ್ ಅವರು ಕಳೆದ ವಾರ ಗ್ಲೆನೆಗಲ್ಸ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry