ತಮಿಳುನಾಡಿನಲ್ಲಿ ಮತ್ತೊಂದು ‍ಪೆರಿಯಾರ್ ಪ್ರತಿಮೆ ಧ್ವಂಸ

7

ತಮಿಳುನಾಡಿನಲ್ಲಿ ಮತ್ತೊಂದು ‍ಪೆರಿಯಾರ್ ಪ್ರತಿಮೆ ಧ್ವಂಸ

Published:
Updated:
ತಮಿಳುನಾಡಿನಲ್ಲಿ ಮತ್ತೊಂದು ‍ಪೆರಿಯಾರ್ ಪ್ರತಿಮೆ ಧ್ವಂಸ

ಚೆನ್ನೈ: ಸಮಾಜ ಸುಧಾರಕ ಪೆರಿಯಾರ್ ಅವರ ಪ್ರತಿಮೆಯೊಂದನ್ನು ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಅಲಂಗುಡಿಯಲ್ಲಿ ಅಪರಿಚಿತ ವ್ಯಕ್ತಿಗಳು ಧ್ವಂಸಗೊಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಎಎನ್‌ಐ ಟ್ವೀಟ್ ಮಾಡಿದೆ.

ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದ ಬೆನ್ನಲ್ಲೇ ರಾಜ್ಯ ರಾಜಧಾನಿಯ ಬೆಲೊನಿಯಾ ಕಾಲೇಜು ವೃತ್ತದಲ್ಲಿದ್ದ ಕಮ್ಯುನಿಸ್ಟ್‌ ನಾಯಕ ಲೆನಿನ್‌ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು. ಇದಾದ ನಂತರ ದೇಶದ ಹಲವೆಡೆ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಸಮಾಜ ಸುಧಾರಕ ಪೆರಿಯಾರ್ ಮತ್ತಿತರ ನಾಯಕರ ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿತ್ತು.

ತಮಿಳುನಾಡಿನ ವೆಲ್ಲೋರ್‌ನ ಪುರಸಭೆ ಕಚೇರಿಯ ಎದುರು ಇದ್ದ ಪೆರಿಯಾರ್ ಪ್ರತಿಮೆಯನ್ನು ಮಾರ್ಚ್‌ 6ರಂದು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು. ಘಟನೆಗೆ ಸಂಬಂಧಿಸಿ ಅದೇ ದಿನ ಇಬ್ಬರನ್ನು ಬಂಧಿಸಲಾಗಿತ್ತು.

‘ತ್ರಿಪುರಾದಲ್ಲಿ ಲೆನಿನ್ ಪ್ರತಿಮೆ ಧ್ವಂಸಗೊಳಿಸಲು ಆರ್‌ಎಸ್‌ಎಸ್ ಮತ್ತು ಬಿಜೆಪಿ ಬೆಂಬಲ ನೀಡಿದಾಗಲೇ, ತಮ್ಮ ಸಿದ್ಧಾಂತಗಳನ್ನು ವಿರೋಧಿಸುವವರ ಪ್ರತಿಮೆಗಳನ್ನು ಧ್ವಂಸಗೊಳಿಸಲು ಕಾರ್ಯಕರ್ತರಿಗೆ ಅವರು ಸಂದೇಶ ರವಾನಿಸಿದಂತಾಯಿತು. ಪೆರಿಯಾರ್‌ ಅವರು ದಲಿತರಿಗಾಗಿ ಹೋರಾಟ ನಡೆಸಿದ ಮಹಾನ್ ಸಮಾಜ ಸುಧಾರಕ. ಅವರ ಪ್ರತಿಮೆಯನ್ನೂ ತಮಿಳುನಾಡಿನಲ್ಲಿ ಧ್ವಂಸಗೊಳಿಸಲಾಗಿದೆ’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry