ರಾಹುಲ್ ಗಾಂಧಿ ಭಾಷಣದ ಪ್ರಭಾವ; ಗೋವಾ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ

7

ರಾಹುಲ್ ಗಾಂಧಿ ಭಾಷಣದ ಪ್ರಭಾವ; ಗೋವಾ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ

Published:
Updated:
ರಾಹುಲ್ ಗಾಂಧಿ ಭಾಷಣದ ಪ್ರಭಾವ; ಗೋವಾ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ

ಪಣಜಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾಷಣದಿಂದ ಪ್ರಭಾವಿತಗೊಂಡ ಗೋವಾ ಕಾಂಗ್ರೆಸ್ ಅಧ್ಯಕ್ಷ ಶಾಂತರಾಮ್ ನಾಯಕ್ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

84ನೇ ಕಾಂಗ್ರೆಸ್ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು ‘ಯುವಪೀಳಿಗೆ ಪಕ್ಷದ ನಾಯಕತ್ವವನ್ನು ಹೊತ್ತು ಮುನ್ನಡೆಯಬೇಕು’ ಎಂದು ಹೇಳಿದ್ದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಾಂತರಾಮ್ ಅವರು, ಹಿರಿಯ ನಾಯಕರು ಹಾಗೂ ಕಾರ್ಯಕರ್ತರ ನಡುವಿನ ಅಂತರದ ಗೋಡೆಯನ್ನು ಒಡೆದು ಹಾಕಿ ನವ ಪ್ರತಿಭಾನ್ವಿತ ಯುವಪೀಳಿಗೆಯಿಂದ ಪಕ್ಷವನ್ನು ಕಟ್ಟಲು ಕರೆ ನೀಡಿದರು.

ಶಾಂತರಾಮ್ ಅವರು ಏಪ್ರಿಲ್ 12ರಂದು 72ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಇವರು ಕಳೆದ ಜುಲೈನಲ್ಲಿ ಗೋವಾ ಕಾಂಗ್ರೆಸ್‌ನ ಅಧ್ಯಕ್ಷರಾಗಿ ನೇಮಕವಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry