ಮಾಗಡಿ: ದನಗಳ ಜಾತ್ರೆಯಲ್ಲಿ ಕರುಗಳದ್ದೇ ಕಾರುಬಾರು

7
ಮಾಗಡಿ ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ಜಾತ್ರೆ ಸಂಭ್ರಮ

ಮಾಗಡಿ: ದನಗಳ ಜಾತ್ರೆಯಲ್ಲಿ ಕರುಗಳದ್ದೇ ಕಾರುಬಾರು

Published:
Updated:
ಮಾಗಡಿ: ದನಗಳ ಜಾತ್ರೆಯಲ್ಲಿ ಕರುಗಳದ್ದೇ ಕಾರುಬಾರು

ಮಾಗಡಿ: ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ಜಾತ್ರೆಯ ಅಂಗವಾಗಿ ದನಗಳ ಜಾತ್ರೆಯಲ್ಲಿ ಕರುಗಳದ್ದೆ ಕಾರುಬಾರು ಬಲು ಜೋರಾಗಿದೆ.

ಯುಗಾದಿ ಹಬ್ಬದ ಮುನ್ನಾದಿನದಿಂದಲೇ ರೈತರು ದನಗಳೊಂದಿಗೆ ಬಂದು ಸೇರುವುದು ವಾಡಿಕೆಯಾಗಿದೆ. ಹಳೆಯ ಮೈಸೂರು ಭಾಗದಲ್ಲಿ ಕರುಗಳನ್ನು ಸಾಕುವ ರೈತರು ರಂಗನಾಥಸ್ವಾಮಿ ದನಗಳ ಜಾತ್ರೆಯಲ್ಲಿ ಹಸಿರು ಚಪ್ಪರ ಹಾಕಿಕೊಂಡು ದನಗಳನ್ನು ಕಟ್ಟಿ ಮಾರಾಟಕ್ಕೆ ಇಡುತ್ತಾರೆ.

ಉತ್ತರ ಕರ್ನಾಕದ ಕಚ್ಚೆಪಂಚೆ ಹಾಕಿದ ರೈತರು ಬಂದು ಕರುಗಳನ್ನು ಖರೀದಿಸಿ ಲಾರಿಗಳನ್ನು ಕೊಂಡೊಯ್ಯುತ್ತಾರೆ. ಮೊದಲೆಲ್ಲ 15 ದಿನಗಳ ಕಾಲ ದನಗಳ ಜಾತ್ರೆ 5 ಕಿ.ಮೀ. ಪರಿಸರದಲ್ಲಿ ನಡೆಯುತ್ತಿತ್ತು. ನಗರೀಕರಣ ಪ್ರಭಾವದಿಂದಾಗಿ ಗುಂಡು ತೋಪು, ಜಾತ್ರೆಯ ಬದಲು, ಕೆರೆಕಟ್ಟೆಗಳು ಮುಚ್ಚಿರುವ ಕಾರಣ ರಸ್ತೆ ಬದಿ ಮತ್ತು ಹೊಸಪೇಟೆ, ತಿರುಮಲೆ ಐಡಿಎಸ್‌ಎಂಟಿ ಲೇಹೌಟ್‌, ಗುಡೇಮಾರನ ಹಳ್ಳಿ ರಸ್ತೆ, ತಿಮ್ಮಸಂದ್ರ, ಎನ್‌ಇಎಸ್‌ ಬಡಾವಣೆಯಲ್ಲಿ ಸೇರುವ ಹತ್ತಾರು ಸಾವಿರ ದನಗಳ ಪರಿಷೆಯಲ್ಲಿ ಸೇರುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry