ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೇಗನ್‌ ಡಯೆಟ್‌’ ಮೆಚ್ಚಿದ ನಟಿಯರು

Last Updated 20 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ವೇಗನ್‌ ಡಯೆಟ್‌’ ಇದು ಹೆಚ್ಚು ಜನಪ್ರಿಯವಾಗಿರುವ ಡಯೆಟ್‌ ಪ್ರಕಾರಗಳಲ್ಲಿ ಒಂದು. ಈ ಡಯೆಟ್‌ ಕ್ರಮ ಅನುಸರಿಸುವವರು ಮಾಂಸಹಾರದ ಜೊತೆಗೆ ಡೈರಿ ಉತ್ಪನ್ನಗಳನ್ನು ಸೇವಿಸುವಂತಿಲ್ಲ. ಬಾಲಿವುಡ್‌ನ ಹಲವು ಜನಪ್ರಿಯ ನಟಿಯರು ಈ ಡಯೆಟ್‌ ಪ್ರಕ್ರಿಯೆ ಮೊರೆ ಹೋಗಿ ಸಂತೋಷ ಕಂಡಿದ್ದಾರೆ.

*ಅನುಷ್ಕಾ ಶರ್ಮಾ: ಮಾಂಸಹಾರಿ ಪ್ರಿಯೆ ಆಗಿದ್ದ ಅನುಷ್ಕಾ ಪ್ರಾಣಿ ಮೇಲಿನ ಪ್ರೀತಿ ಮತ್ತು ಆಧ್ಯಾತ್ಮಿಕ ಕಾರಣಕ್ಕಾಗಿ ಸಸ್ಯಹಾರಿ ಆಗಿ ಬದಲಾದವರು. ಡೈರಿ ಉತ್ಪನ್ನಗಳನ್ನು ಇವರು ಸೇವಿಸುವುದಿಲ್ಲ. ಸಸ್ಯಹಾರಿ ಆಗಿ ಬದಲಾಗುವುದು ತುಂಬಾ ಕಷ್ಟವಾಗಿತ್ತು. ಆದರೆ ಇದು ಪ್ರಜ್ಞಾಪೂರ್ವಕವಾಗಿ ತೆಗೆದುಕೊಂಡ ನಿರ್ಧಾರವಾಗಿದ್ದರಿಂದ ಈ ನಿರ್ಣಯಕ್ಕೆ ಬದ್ಧವಾಗಿದ್ದೆ ಎನ್ನುತ್ತಾರೆ ಇವರು. ಇವರು ಮಾಂಸಾಹಾರ ತ್ಯಜಿಸಿ ಮೂರು ವರ್ಷವಾಗಿದೆ. ಅಂದಹಾಗೆ ಇವರು ಮಾಂಸಹಾರ ತ್ಯಜಿಸಿದ್ದು ನಾಯಿಗೋಸ್ಕರ. ಇವರ ನಾಯಿಗೆ ಮಾಂಸದ ವಾಸನೆ ಆಗುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿದ್ದು. ತಕ್ಷಣವೇ ಪ್ರತಿಕ್ರಿಸಿದ ಅನುಷ್ಕಾ ‘ಇವೆಲ್ಲ ಸುಳ್ಳು ಸುದ್ದಿ. ಅವನು (ನಾಯಿ) ಮಾಂಸಹಾರ ತಿನ್ನುತ್ತಾನೆ. ಅವನು ನಾಯಿ’ ಎಂದು ಟ್ವೀಟ್‌ ಮಾಡಿದ್ದರು.

*ಆಲಿಯಾ ಭಟ್‌: ಆಲಿಯಾಗೆ ಮೊದಲಿನಿಂದಲೂ ನಾನ್‌ವೆಜ್‌ ಎಂದರೆ ಅಷ್ಟಕಷ್ಟೆ. 2015ರಿಂದ ಇವರು ಮಾಂಸಹಾರ ಸೇವಿಸುವುದನ್ನು ನಿಲ್ಲಿಸಿದ್ದಾರೆ. ಈ ನಿರ್ಧಾರಕ್ಕೆ ಡಯೆಟ್‌ ಕಾರಣ. ‘ಮಾಂಸಹಾರ ದೇಹದ ಉಷ್ಣತೆ ಹೆಚ್ಚಿಸುತ್ತದೆ. ಆರೋಗ್ಯದ ದೃಷ್ಟಿಯಿಂದ ನಾನು ಸಸ್ಯಹಾರಿಯಾದೆ. ಈಗ ದೇಹ ಹಗುರವಾಗಿದ್ದು, ದೈಹಿಕ ಸಮಸ್ಯೆಯೂ ಕಡಿಮೆಯಾಗಿ, ನೆಮ್ಮದಿಯಾಗಿದ್ದೇನೆ’ ಎನ್ನುತ್ತಾರೆ ಇವರು.

*ರೀಚಾ ಛಡ್ಡ: ಮಾಂಸಹಾರವನ್ನು ಹೆಚ್ಚಾಗಿ ಸೇವಿಸುವ ಪಂಜಾಬ್‌ ಮೂಲದವರಾದ ರೀಚಾ ಪ್ರಾಣಿ ಪ್ರೇಮಿ. ಇದೇ ಕಾರಣಕ್ಕೆ ಇವರು ಮಾಂಸಹಾರ ಸೇವನೆಯಿಂದ ದೂರಾಗಿದ್ದಾರೆ. ಹೊಟ್ಟೆ ತುಂಬಿಸಿಕೊಳ್ಳಲು ನಮಗಾಗಿ ಹಣ್ಣು, ತರಕಾರಿ, ಸೊಪ್ಪುಗಳಿರುವಾಗ ಪ್ರಾಣಿಗಳನ್ನು ಕೊಂದು ತಿನ್ನುವುದು ಎಷ್ಟು ಸರಿ ಎಂಬುದು ಪ್ರಶ್ನೆ. 2014ರಿಂದ ಇವರು ಮಾಂಸಹಾರ ತ್ಯಜಿಸಿದ್ದಾರೆ.

*ಸೋನಂ ಕಪೂರ್‌: ಸೋನಂ ಮಾಂಸಹಾರ ಸೇವಿಸುವುದನ್ನು ಬಿಟ್ಟು ಹಲವು ವರ್ಷಗಳೇ ಸಂದಿವೆ. ಆದರೆ 2016ರಿಂದ ಅವರು ಡೈರಿ ಉತ್ಪನ್ನಗಳನ್ನು ಸೇವಿಸುವುದನ್ನು ನಿಲ್ಲಿಸಿದ್ದಾರೆ. ‘ಮಾಂಸಹಾರ ಒಳ್ಳೆಯದಲ್ಲ ಎಂದು ನಾನು ಹೇಳುವುದಿಲ್ಲ. ಆಹಾರ ಸೇವನೆ ಅವರವರ ಇಷ್ಟ. ನನ್ನ ಅಮ್ಮ ಅಪ್ಪಟ ಸಸ್ಯಹಾರಿ ಹಾಗಾಗಿ ನಾನು ಅವರನೇ ಅನುಕರಿಸಿದೆ’ ಎನ್ನುತ್ತಾರೆ ಇವರು.

*ಜಾಕ್ವೆಲಿನ್‌ ಫರ್ನಾಂಡೀಸ್‌: ಸಾವಯವ ಆಹಾರಗಳನ್ನೇ ಹೆಚ್ಚಾಗಿ ಸೇವಿಸುವ ಜಾಕ್ವಲಿನ್‌ ಡೈರಿ ಉತ್ಪನ್ನ ಮತ್ತು ಮಾಂಸಹಾರ ಸೇವಿಸುವುದಿಲ್ಲ. ಇವರು ಮುಂಬೈನಲ್ಲಿ ರೆಸ್ಟೊರೆಂಟನ್ನು ಪ್ರಾರಂಭಿಸಿದ್ದು, ಅಲ್ಲಿ ವೇಗನ್‌ ಆಹಾರವೇ ಪ್ರಧಾನ. ಸ್ನೇಹಿತರು, ಬಂಧಗಳಿಗೂ ಇವರು ವೇಗನ್‌ ಆಹಾರ ಕ್ರಮದ ಮಹತ್ವ ವಿವರಿಸುತ್ತಾರೆ. 2014ರಿಂದ ಇವರು ಸಸ್ಯಹಾರಿಯಾದರು.

*ಸೋನಾಕ್ಷಿ ಸಿನ್ಹಾ: ಗುಂಡುಗುಂಡಾಗಿದ್ದ ಸೋನಾಕ್ಷಿ ವೇಗನ್‌ ಆಹಾರ ಕ್ರಮವನ್ನು ಅನುಕರಿಸುವ ಮೂಲಕವೇ ತೂಕವನ್ನು ಕಡಿಮೆ ಮಾಡಿಕೊಂಡರು. ಈ ಡಯೆಟ್‌ ಕ್ರಮದಿಂದ ಸೋನಾಕ್ಷಿ ಮೆಟಾಬೊಲಿಸಂ ಸುಧಾರಣೆ ಆಯಿತಂತೆ. ಸೋನಾಕ್ಷಿ ಪ್ರಾಣಿ ಪ್ರೇಮಿಯೂ ಹೌದು.

*ಕಂಗನಾ: 2013ರಿಂದ ಕಂಗನಾ ಡೈರಿ ಮತ್ತು ಮಾಂಸಹಾರ ಉತ್ಪನ್ನಗಳನ್ನು ತ್ಯಜಿಸಿದರು. ಈ ಆಹಾರಗಳನ್ನು ವ್ಯರ್ಜಿಸಿದ ನಂತರ ಇವರು ಆರೋಗ್ಯ ಸುಧಾರಣೆಯಾಯಿತಂತೆ. ‘ಮೊದಲು ಅಜೀರ್ಣದ ಸಮಸ್ಯೆ ಹೆಚ್ಚಿತು. ವೇಗನ್‌ ಆಹಾರ ಕ್ರಮದಿಂದ ತುಂಬಾ ಪ್ರಯೋಜನ ಕಂಡುಕೊಂಡೆ’ ಎನ್ನುತ್ತಾರೆ ಇವರು. ತರಕಾರಿಗಳಲ್ಲಿ ಬಹಳ ವೈವಿಧ್ಯವಿರುವ ದಕ್ಷಿಣ ಭಾರತದ ಅಡುಗೆ ಮಾಡುವುದನ್ನು ಇವರು ಕಲಿತಿದ್ದಾರೆ. ಇವರು ಅಡುಗೆ ತೆಂಗಿನ ಕಾಯಿಯ ಹಾಲನ್ನು ಬಳಸುತ್ತಾರೆ. ಆಹಾರ ಕ್ರಮ ಬದಲಾವಣೆಯಿಂದ ಇವರ ಮನಸು ಪ್ರಶಾಂತವಾಗಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT