ಜೆಎನ್‌ಯು ಪ್ರಾಧ್ಯಾಪಕ ಅತುಲ್ ಜೋಹ್ರಿ ಬಂಧನ

7

ಜೆಎನ್‌ಯು ಪ್ರಾಧ್ಯಾಪಕ ಅತುಲ್ ಜೋಹ್ರಿ ಬಂಧನ

Published:
Updated:
ಜೆಎನ್‌ಯು ಪ್ರಾಧ್ಯಾಪಕ ಅತುಲ್ ಜೋಹ್ರಿ ಬಂಧನ

ನವದೆಹಲಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಪ್ರಾಧ್ಯಾಪಕ ಅತುಲ್ ಜೋಹ್ರಿ ಅವರನ್ನು ದೆಹಲಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಜೀವ ವಿಜ್ಞಾನ ವಿಷಯ ಬೋಧಿಸುತ್ತಿದ್ದ ಅತುಲ್ ಜೋಹ್ರಿ ವಿರುದ್ಧ ಎಂಟು ವಿದ್ಯಾರ್ಥಿನಿಯರು ದೂರು ದಾಖಲಿಸಿದ್ದರು. ನಂತರ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಸಂಘ ಪ್ರತಿಭಟನೆ ನಡೆಸಿತ್ತು.

ಈ ಮಧ್ಯೆ14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕೆಂದು ಪೊಲೀಸರು ಮನವಿ ಮಾಡಿದ್ದರು. ಇದರ ವಿರುದ್ಧ ಜೋಹ್ರಿ ಪಟಿಯಾಲ ಹೌಸ್ ಕೋರ್ಟ್‌ಗೆ ಮನವಿ ಮಾಡಿದ್ದು, ‘ಪೊಲೀಸರ ಕೋರಿಕೆಯನ್ನು ತಿರಸ್ಕರಿಸಬೇಕು. ಜೈಲಿಗೆ ಹೋದಲ್ಲಿ ನನ್ನ ಭವಿಷ್ಯಕ್ಕೆ ತೊಂದರೆಯಾಗಲಿದೆ’ ಎಂದು ವಿನಂತಿಸಿದ್ದಾರೆ.

ತಮ್ಮ ವಿರುದ್ಧ ದೂರು ದಾಖಲಾದ ಬಳಿಕ ಜೋಹ್ರಿ ಮಾ.16ರಂದು ರಾಜೀನಾಮೆ ನೀಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry