ರಾಷ್ಟ್ರಪತಿ ರಾಮನಾಥ ಕೋವಿಂದ್‌ರಿಂದ ಪದ್ಮ ಪುರಸ್ಕಾರ ಪ್ರದಾನ

7

ರಾಷ್ಟ್ರಪತಿ ರಾಮನಾಥ ಕೋವಿಂದ್‌ರಿಂದ ಪದ್ಮ ಪುರಸ್ಕಾರ ಪ್ರದಾನ

Published:
Updated:
ರಾಷ್ಟ್ರಪತಿ ರಾಮನಾಥ ಕೋವಿಂದ್‌ರಿಂದ ಪದ್ಮ ಪುರಸ್ಕಾರ ಪ್ರದಾನ

ನವದೆಹಲಿ: ತಮಿಳು ಚಿತ್ರರಂಗದ ಸಂಗೀತ ನಿರ್ದೇಶಕ ಇಳಯರಾಜ, ಕಲೆ–ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕರ್ನಾಟಕದ ರುದ್ರಪಟ್ಟಣಂ ತ್ಯಾಗರಾಜನ್‌ ಹಾಗೂ ತಾರಾನಾಥನ್‌ ಸೇರಿದಂತೆ ಒಟ್ಟು 85 ಮಂದಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪದ್ಮ ಪುರಸ್ಕಾರ ಪ್ರದಾನ ಮಾಡಿದರು.

ಈ ಪೈಕಿ ಮೂವರಿಗೆ ಪದ್ಮವಿಭೂಷಣ, 9 ಜನರಿಗೆ ಪದ್ಮಭೂಷಣ ಹಾಗೂ 73 ಜನ ಸಾಧಕರಿಗೆ ಪದ್ಮಶ್ರೀ ಗೌರವ ದೊರೆತಿದೆ.

ಮಂಗಳವಾರ ಸಂಜೆ ನಡೆದ ಪದ್ಮ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಗೃಹ ಸಚಿವ ರಾಜನಾಥ್ ಸಿಂಗ್, ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್, ಎನ್‌ಸಿಪಿ ವರಿಷ್ಠ ಶರದ್‌ ಪವಾರ್ ಸೇರಿದಂತೆ ಅನೇಕ ಗಣ್ಯರು ಮತ್ತು ಕೇಂದ್ರ ಸಚಿವರು ಹಾಜರಿದ್ದರು.

ರಾಜ್ಯದ ಬಿಲಿಯರ್ಡ್ಸ್‌ ಆಟಗಾರ ಪಂಕಜ್‌ ಅಡ್ವಾಣಿ ಅವರಿಗೆ ಪದ್ಮಭೂಷಣ ಪುರಸ್ಕಾರ ದೊರೆತಿದ್ದು, ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ತುಮಕೂರು ಜಿಲ್ಲೆ ಪಾವಗಡದ ಸೂಲಗಿತ್ತಿ ನರಸಮ್ಮ, ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ಜನಪದ ಕಲಾವಿದ ಇಬ್ರಾಹಿಂ ಸುತಾರ್‌, ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಬೆಳಗಾವಿ ಜಿಲ್ಲೆಯ ಸೀತವ್ವ ಜೋಡಟ್ಟಿ, ಕವಿ ದೊಡ್ಡರಂಗೇಗೌಡ, ಸಂಗೀತ ಕಲಾವಿದರಾದ ಆರ್‌.ಸತ್ಯನಾರಾಯಣ, ರುದ್ರಪಟ್ಟಣಂ ತ್ಯಾಗರಾಜನ್‌ ಹಾಗೂ ತಾರಾನಾಥನ್‌ ಅವರು ಪ್ರಸಕ್ತ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿರುವ ಕನ್ನಡಿಗರಾಗಿದ್ದಾರೆ.

ತಮಿಳು ಚಿತ್ರರಂಗದ ಸಂಗೀತ ನಿರ್ದೇಶಕ ಇಳಯರಾಜ, ಮಹಾರಾಷ್ಟ್ರದ ಗುಲಾಂ ಮುಸ್ತಫಾ ಖಾನ್‌, ವಿಚಾರವಾದಿ ಕೇರಳದ ಪಿ.ಪರಮೇಶ್ವರನ್‌ ಅವರು ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದು, ಭಾರತ ಕ್ರಿಕೆಟ್‌ ತಂಡದ ಆಟಗಾರ, ಮಾಜಿ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರು ಪದ್ಮಭೂಷಣ ಗೌರವಕ್ಕೆ ಭಾಜನರಾಗಿದ್ದಾರೆ.

ಇನ್ನಷ್ಟು...

ರಾಜ್ಯದ 9 ಸಾಧಕರಿಗೆ ಪದ್ಮ ಪುರಸ್ಕಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry