ಇಸ್ರೇಲ್‌ನ ಅಮೆರಿಕ ರಾಯಭಾರಿ ಡೇವಿಡ್‌ ‘ನಾಯಿಯ ಮಗ’

7
ಪ್ಯಾಲೆಸ್ಟೀನ್‌ ಅಧ್ಯಕ್ಷ ಮೊಹಮದ್‌ ಅಬ್ಬಾಸ್‌ ಟೀಕೆ

ಇಸ್ರೇಲ್‌ನ ಅಮೆರಿಕ ರಾಯಭಾರಿ ಡೇವಿಡ್‌ ‘ನಾಯಿಯ ಮಗ’

Published:
Updated:
ಇಸ್ರೇಲ್‌ನ ಅಮೆರಿಕ ರಾಯಭಾರಿ ಡೇವಿಡ್‌ ‘ನಾಯಿಯ ಮಗ’

ರಮಲ್ಹಾ: ಇಸ್ರೇಲ್‌ನಲ್ಲಿರುವ ಅಮೆರಿಕ ರಾಯಭಾರಿ ಡೇವಿಡ್‌ ಫ್ರೈಡ್‌ಮನ್‌‘ನಾಯಿಯ ಮಗ’ ಎಂದು ಪ್ಯಾಲೆಸ್ಟೀನ್‌ ಅಧ್ಯಕ್ಷ ಮೊಹಮದ್‌ ಅಬ್ಬಾಸ್‌ ಕಟುವಾಗಿ ಟೀಕಿಸಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಅವರ ನೀತಿಗಳನ್ನು ಟೀಕಿಸಿರುವ ಅವರು, ಫ್ರೈಡ್‌ಮನ್‌ ವಲಸಿಗ ಎಂದು ಜರಿದಿದ್ದಾರೆ.

ಪಶ್ಚಿಮ ದಂಡೆ ಮೇಲೆ ನಡೆದ ದಾಳಿಯ ಬಗ್ಗೆ  ಫ್ರೈಡ್‌ಮನ್‌ ಟ್ವೀಟ್‌ ಮಾಡಿದ ಬಳಿಕ ಅಬ್ಬಾಸ್‌ ಖಾರವಾಗಿ ಈ ಪ್ರತಿಕ್ರಿಯೆ ನೀಡಿದ್ದಾರೆ.

‘ಭೀಕರ ದಾಳಿ ನಡೆದರೂ ಪ್ಯಾಲೆಸ್ಟೀನ್‌  ಮುಖಂಡರು ಖಂಡಿಸಲಿಲ್ಲ’ ಎಂದು ಫ್ರೈಡ್‌ಮನ್‌ ಟ್ವೀಟ್‌ ಮಾಡಿದ್ದರು.

ಅಬ್ಬಾಸ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಫ್ರೈಡ್‌ಮನ್‌, ‘ಈ ರೀತಿಯ ಹೇಳಿಕೆ ರಾಜಕೀಯದಿಂದ ಕೂಡಿದೆಯೇ ಅಥವಾ ಯಹೂದಿಗಳ ವಿರೋಧಿಯಾಗಿದೆಯೇ’ ಎಂದು ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry