ಊನಾ ಸಂತ್ರಸ್ತರು ಬೌದ್ಧ ಧರ್ಮಕ್ಕೆ?

7

ಊನಾ ಸಂತ್ರಸ್ತರು ಬೌದ್ಧ ಧರ್ಮಕ್ಕೆ?

Published:
Updated:
ಊನಾ ಸಂತ್ರಸ್ತರು ಬೌದ್ಧ ಧರ್ಮಕ್ಕೆ?

ಅಹಮದಾಬಾದ್‌: ಗುಜರಾತ್‌ನ ಊನಾ ಜಿಲ್ಲೆಯಲ್ಲಿ ಸ್ವಯಂಘೋಷಿತ ಗೋರಕ್ಷಕರಿಂದ ಅಮಾನವೀಯವಾಗಿ ಹಲ್ಲೆಗೊಳಗಾಗಿದ್ದ ದಲಿತ ಕುಟುಂಬದ ಸದಸ್ಯರು ಬೌದ್ಧ ಧರ್ಮಕ್ಕೆ ಸೇರಲು ನಿರ್ಧರಿಸಿದ್ದಾರೆ. ಈ ಮತಾಂತರಕ್ಕೆ ಅನುಮತಿ ಕೊಡುವಂತೆ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

‘ನಾವು ಹಿಂದೂಗಳು. ಆದರೆ ಅವರು ನಮ್ಮನ್ನು ಹಿಂದೂಗಳು ಎಂದು ಪರಿಗಣಿಸುತ್ತಿಲ್ಲ. ಆದ್ದರಿಂದಲೇ ಅವರು ನಮ್ಮ ಮೇಲೆ ಅಂತಹ ದೌರ್ಜನ್ಯ ನಡೆಸಿದ್ದರು. ಏಪ್ರಿಲ್‌ 29ರಂದು ಬೌದ್ಧ ಧರ್ಮಕ್ಕೆ ಸೇರಲು ನಿರ್ಧರಿಸಿದ್ದೇವೆ’ ಎಂದು ಕುಟುಂಬದ ಮುಖ್ಯಸ್ಥ ಬಾಲುಭಾಯಿ ಸರವಯ್ಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry