ಮೇರಿ ಕೋಮ್ ಎನ್‌ಜಿಒ ವ್ಯವಹಾರಗಳ ಪರಿಶೀಲನೆ

7
ಲೋಕಸಭೆಗೆ ಮಾಹಿತಿ ನೀಡಿದ ಸಚಿವ ರಿಜಿಜು

ಮೇರಿ ಕೋಮ್ ಎನ್‌ಜಿಒ ವ್ಯವಹಾರಗಳ ಪರಿಶೀಲನೆ

Published:
Updated:
ಮೇರಿ ಕೋಮ್ ಎನ್‌ಜಿಒ ವ್ಯವಹಾರಗಳ ಪರಿಶೀಲನೆ

ನವದೆಹಲಿ: ಕುಸ್ತಿಪಟು ಮೇರಿ ಕೋಮ್ ಅವರು ನಡೆಸುತ್ತಿರುವ ಸ್ವಯಂಸೇವಾ ಸಂಸ್ಥೆ (ಎನ್‌ಜಿಒ) ಸೇರಿದಂತೆ 22 ಎನ್‌ಜಿಒಗಳು ವಿದೇಶಿ ದೇಣಿಗೆ ಕಾಯ್ದೆ ಉಲ್ಲಂಘನೆ ಮಾಡಿವೆಯೇ ಎಂಬುದರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.

ಮೇರಿ ಕೋಮ್ ಅವರ ‘ರೀಜನಲ್ ಬಾಕ್ಸಿಂಗ್ ಫೌಂಡೇಷನ್’, ದೆಹಲಿಯ ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್, ಬೆಂಗಳೂರಿನ ‘ಸೆಂಟರ್ ಫಾರ್ ಇಂಟರ್ನೆಟ್ ಸೊಸೈಟಿ–ಸಿಐಎಸ್’, ಮಾಹಿತಿ ತಂತ್ರಜ್ಞಾನ ಸೇವಾ ಸಂಸ್ಥೆಗಳ ಒಕ್ಕೂಟವಾದ ನಾಸ್ಕಾಂ ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ಗಳು ಈ ಪಟ್ಟಿಯಲ್ಲಿ ಇವೆ. ‘ನಿಯಮಗಳನ್ನು ಉಲ್ಲಂಘಿಸಿ ವಿದೇಶಿ ದೇಣಿಗೆ ಪಡೆದ ಮತ್ತು ದೇಣಿಗೆ ಬಳಕೆ ಮಾಡಿದ ಆರೋಪ ಇವುಗಳ ಮೇಲಿದೆ. ಹೀಗಾಗಿ ಗೃಹ ಸಚಿವಾಲಯ ಇವುಗಳ ವಿರುದ್ಧ ತನಿಖೆ ನಡೆಸುತ್ತಿದೆ’ ಎಂದು ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಲೋಕಸಭೆಗೆ ತಿಳಿಸಿದ್ದಾರೆ.

‘ತನಿಖೆಯ ಭಾಗವಾಗಿ ಈ ಎನ್‌ಜಿಒಗಳಿಗೆ ಪ್ರಶ್ನಾವಳಿಗಳನ್ನು ನೀಡಿ, ಉತ್ತರಿಸುವಂತೆ ಸೂಚಿಸಲಾಗಿತ್ತು. ಅವುಗಳು ನೀಡಿರುವ ಉತ್ತರವನ್ನು ಪರಿಶೀಲಿಸಲಾಗುತ್ತಿದೆ. ಆದರೆ ಈಗಾಗಲೇ ಅವುಗಳ ದಾಖಲೆಗಳ ಪರಿಶೀಲನೆ ಮತ್ತು ಲೆಕ್ಕಪರಿಶೋಧನಾ ಕಾರ್ಯ ಮುಗಿದಿದೆ. ಇವಲ್ಲದೆ ಇನ್ನೂ 21 ಎನ್‌ಜಿಒಗಳ ವಿರುದ್ಧ ಎಲ್ಲಾ ಸ್ವರೂಪದ ಪರಿಶೀಲನೆ ಮತ್ತು ತನಿಖೆ ಪೂರ್ಣಗೊಂಡಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry