ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಂದಿಂಚು ಭೂಮಿ ಬಿಟ್ಟು ಕೊಡುವುದಿಲ್ಲ’

Last Updated 20 ಮಾರ್ಚ್ 2018, 20:16 IST
ಅಕ್ಷರ ಗಾತ್ರ

ಬೀಜಿಂಗ್‌: ಚೀನಾ ತನ್ನ ಸಾರ್ವಭೌಮತೆಯನ್ನು ಕಾಪಾಡಲಿದ್ದು ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ ಎಂದು ಅಧ್ಯಕ್ಷ ಷಿ ಜಿನ್‌ಪಿಂಗ್‌ ಮಂಗಳವಾರ ಸ್ಪಷ್ಟವಾಗಿ ಹೇಳಿದ್ದಾರೆ.

ಅಧಿವೇಶನದ ಕೊನೆಯ ದಿನವಾದ ಮಂಗಳವಾರ ಸಂಸತ್‌ನಲ್ಲಿ 30 ನಿಮಿಷಗಳ ಕಾಲ ಮಾತನಾಡಿದ ಅವರು, ಚೀನಾದ ಜನರು ಹಾಗೂ ದೇಶ ತನ್ನ ಒಂದೇ ಒಂದು ಇಂಚು ಭೂಮಿ ಬಿಟ್ಟುಕೊಡಲು ಸಿದ್ಧರಿಲ್ಲ ಎಂದರು.

ಭಾರತದೊಂದಿಗಿನ ಗಡಿ ವಿವಾದದ ಹೊರತಾಗಿಯೂ, ಪೂರ್ವ ಚೀನಾ ಸಮುದ್ರದಲ್ಲಿ ಜಪಾನ್ ನಿಯಂತ್ರಣದಲ್ಲಿರುವ ವಿವಾದಿತ ದ್ವೀಪಗಳ ಮೇಲೆ ಚೀನಾ ತನ್ನ ಹಕ್ಕು ಸಾಧಿಸುತ್ತಿದೆ. ಇದಲ್ಲದೇ, ದಕ್ಷಿಣ ಚೀನಾ ಸಮುದ್ರದ ಮೇಲೆಯೂ ತನ್ನ ನಿಯಂತ್ರಣ ಹೊಂದಲು ಚೀನಾ ಮುಂದಾಗುತ್ತಿದೆ.

ಈ ಮಧ್ಯೆ ವಿಯಟ್ನಾಂ, ಫಿಲಿಪ್ಪೀನ್ಸ್‌, ಮಲೇಷ್ಯಾ, ಬ್ರೂನಿ ಹಾಗೂ ತೈವಾನ್‌ ರಾಷ್ಟ್ರಗಳು ದಕ್ಷಿಣ ಚೀನಾ ಸಮುದ್ರದ ಮೇಲೆ ತನ್ನ ಹಕ್ಕು ಪ್ರತಿಪಾದಿಸುತ್ತಿವೆ.

ಒಪ್ಪಿಗೆ: ಚೀನಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಎರಡು ಅವಧಿಗೆ ಮಾತ್ರ ಆಯ್ಕೆಯಾಗಲು ಇದ್ದ ಮಿತಿಯನ್ನು ತೆಗೆದು ಹಾಕುವ ತಿದ್ದುಪಡಿ ಮಸೂದೆಗೆ ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌ (ಸಂಸತ್‌) ಒ‍ಪ್ಪಿಗೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT