ಕ್ಯಾನ್ಸರ್‌ ರೋಗಿಗಳಿಗೆ ಸೆಲ್ಫ್‌–ವಿ ಮೂಲಕ ಆತ್ಮಸ್ಥೈರ್ಯ

7

ಕ್ಯಾನ್ಸರ್‌ ರೋಗಿಗಳಿಗೆ ಸೆಲ್ಫ್‌–ವಿ ಮೂಲಕ ಆತ್ಮಸ್ಥೈರ್ಯ

Published:
Updated:

ಬೆಂಗಳೂರು: ಕ್ಯಾನ್ಸರ್‌ ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ರೂಪಿಸಿರುವ ‘ಸೆಲ್ಫ್ ವಿ –ಬದುಕುಳಿದವರ ಕಥೆಗಳು’ ಎಂಬ ಅಭಿಯಾನದ 4ನೇ ಆವೃತ್ತಿಗೆ ಮಂಗಳವಾರ ಚಾಲನೆ ನೀಡಲಾಯಿತು.

ಎಚ್‌ಸಿಜಿ ಸ್ಪೆಷಲಿಸ್ಟ್ ಇನ್ ಕ್ಯಾನ್ಸರ್ ಕೇರ್ ಹಗೂ ಪಿಂಕ್ ಹೋಪ್ ಕ್ಯಾನ್ಸರ್ ಪೇಷಂಟ್ ಸಪೋರ್ಟ್ ಗ್ರೂಪ್ ಜಂಟಿಯಾಗಿ ಈ ಅಭಿಯಾನ ಹಮ್ಮಿಕೊಂಡಿವೆ.

‘ಕ್ಯಾನ್ಸರ್‌ನೊಂದಿಗೆ ಹೋರಾಡಿ ಬದುಕುಳಿದವರು 60-90 ಸೆಕೆಂಡುಗಳ ಸ್ವಯಂ-ವಿಡಿಯೊ ತೆಗೆದು acebook.com/selfv ಅಥವಾ www.selfv.in ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಬೇಕು.  ಕ್ಯಾನ್ಸರ್‌ ರೋಗಿಗಳಿಗೆ ಈ ಕಥೆಗಳು ಸ್ಪೂರ್ತಿ ನೀಡುತ್ತವೆ. ಕ್ಯಾನ್ಸರ್‌ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡುವುದೇ ಅಭಿಯಾನದ ಉದ್ದೇಶ’ ಎಂದು ಅಭಿಯಾನದ ಸದಸ್ಯೆ ಡಾ.ನಳಿನಿ ರಾವ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕ್ಯಾನ್ಸರ್‌ ರೋಗದಿಂದ ಗುಣಮುಖರಾದ ಫರೀದಾ ರಿಜ್ವಾನ್ ಮಾತನಾಡಿ, ‘ಕ್ಯಾನ್ಸರ್ ರೋಗಿಗಳ ನೋವು ನಮಗೆ ಅರ್ಥವಾಗುತ್ತದೆ. ಅವರಿಗೆ ಚಿಕಿತ್ಸೆಯ ಜೊತೆಗೆ ಮಾನಸಿಕ ಸ್ಥೈರ್ಯ ಅಗತ್ಯವಿರುತ್ತದೆ. ಈ ವಿಡಿಯೊಗಳು ರೋಗಿಗಳಿಗೆ ಬದುಕುವ ಭರವಸೆ ನೀಡುತ್ತವೆ. ಈ ಅಭಿಯಾನವು ರೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry