ಐಎಸ್‌ಎಲ್‌: ಚೆನ್ನೈಯಿನ್‌ ತಂಡದಲ್ಲಿ ಉಳಿದ ಮೆಲ್ಸನ್

7

ಐಎಸ್‌ಎಲ್‌: ಚೆನ್ನೈಯಿನ್‌ ತಂಡದಲ್ಲಿ ಉಳಿದ ಮೆಲ್ಸನ್

Published:
Updated:
ಐಎಸ್‌ಎಲ್‌: ಚೆನ್ನೈಯಿನ್‌ ತಂಡದಲ್ಲಿ ಉಳಿದ ಮೆಲ್ಸನ್

ಚೆನ್ನೈ: ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಫೈನಲ್‌ ಪಂದ್ಯದಲ್ಲಿ ಮಿಂಚಿದ್ದ ಮೆಲ್ಸನ್‌ ಅಲ್ವಸ್‌ ಹಾಗೂ ಗ್ರೆಗೊರಿ ನೆಲ್ಸನ್ ಅವರೊಂದಿಗಿನ ಒಪ್ಪಂದವನ್ನು ಚೆನ್ನೈ ಯಿನ್ ಎಫ್‌ಸಿ ತಂಡ ಮುಂದುವರಿಸಿದೆ.

ಮೆಲ್ಸನ್‌ ಎರಡು ವರ್ಷಗಳ ಅವಧಿಗೆ ಹಾಗೂ ನೆಲ್ಸನ್‌ ಒಂದು ವರ್ಷ ಚೆನ್ನೈಯಿನ್ ತಂಡದಲ್ಲಿ ಆಡಲಿದ್ದಾರೆ. ಐಎಸ್‌ಎಲ್ ಫೈನಲ್‌ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ತಂಡ 3–2 ಗೋಲುಗಳಲ್ಲಿ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ಎದುರು ಜಯಿಸಿತ್ತು.

ಈ ಪಂದ್ಯದಲ್ಲಿ ಮೆಲ್ಸನ್‌ ಎರಡು ಗೋಲು ಗಳಿಸಿದ್ದರು.

‘ಚೆನ್ನೈಯಿನ್ ಎಫ್‌ಸಿ ತಂಡದಲ್ಲಿ ಮುಂದುವರಿದಿರುವುದಕ್ಕೆ ಅತೀವ ಖುಷಿಯಾಗಿದೆ. ಐಎಸ್‌ಎಲ್ ಫೈನಲ್ ಪಂದ್ಯದಲ್ಲಿ ಎರಡು ಗೋಲು ದಾಖಲಿ ಸಿದ್ದು ನನ್ನ ಸಂಭ್ರಮವನ್ನು ಹೆಚ್ಚಿಸಿದೆ’ ಎಂದು ಮೆಲ್ಸನ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry