ಕೇಂದ್ರ ವಿಭಾಗದ ನೀರಿನ ಅದಾಲತ್‌ ಇಂದು

7

ಕೇಂದ್ರ ವಿಭಾಗದ ನೀರಿನ ಅದಾಲತ್‌ ಇಂದು

Published:
Updated:

ಬೆಂಗಳೂರು: ಬೆಂಗಳೂರು ಜಲಮಂಡಳಿಯು ಇದೇ 21ರಂದು (ಬುಧವಾರ) ಬೆಳಿಗ್ಗೆ 9.30 ರಿಂದ 11ರವರೆಗೆ ಕೇಂದ್ರ-3 ಉಪವಿಭಾಗದಲ್ಲಿ ನೀರಿನ ಅದಾಲತ್‌ ಆಯೋಜಿಸಿದೆ.

ನೀರಿನ ಬಿಲ್, ನೀರು ಮತ್ತು ಒಳಚರಂಡಿ ಸಂಪರ್ಕ ವಿಳಂಬ, ಗೃಹ ಬಳಕೆಯಿಂದ ಗೃಹೇತರಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳ ಬಗ್ಗೆ ಅದಾಲತ್‍ನಲ್ಲಿ ಪರಿಹಾರ ಪಡೆಯಬಹುದು.

ಕೇಂದ್ರ-3 ಉಪವಿಭಾಗ ವ್ಯಾಪ್ತಿಯ ಫ್ರೇಜರ್‌ ಟೌನ್, ಮಚಲಿ ಬೆಟ್ಟ, ಪಿಳ್ಳಣ್ಣ ಗಾರ್ಡನ್, ಡಿ.ಜೆ.ಹಳ್ಳಿ ಸೇವಾ ಠಾಣೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಫ್ರೇಜರ್ ಟೌನ್‌ ಉಪವಿಭಾಗ ಕಚೇರಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಬಗೆಹರಿಸಲಿದ್ದಾರೆ.

ಸಂಪರ್ಕ: 22945187/167.

ನಾಗರಿಕರು ಮಂಡಳಿಯ 24X7 ದೂರು ನಿರ್ವಹಣಾ ಕೇಂದ್ರದ ದೂರವಾಣಿ -22238888, ಸಹಾಯವಾಣಿ 1916 ಹಾಗೂ ವಾಟ್ಸ್‌ಆ್ಯಪ್‌ ಸಂಖ್ಯೆ- 8762228888 ಸಂಪರ್ಕಿಸಬಹುದು ಎಂದು ಜಲಮಂಡಳಿ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry