4
ಇಂಗ್ಲೆಂಡ್ ಎದುರಿನ ಎರಡನೇ ಅಭ್ಯಾಸ ಪಂದ್ಯ

ಮಹಿಳೆಯರ ಟ್ವೆಂಟಿ–20 ಕ್ರಿಕೆಟ್: ಭಾರತ ‘ಎ’ ತಂಡಕ್ಕೆ ಮತ್ತೆ ಕಾಡಿದ ನಿರಾಸೆ

Published:
Updated:
ಮಹಿಳೆಯರ ಟ್ವೆಂಟಿ–20 ಕ್ರಿಕೆಟ್: ಭಾರತ ‘ಎ’ ತಂಡಕ್ಕೆ ಮತ್ತೆ ಕಾಡಿದ ನಿರಾಸೆ

ಮುಂಬೈ: ಮತ್ತೊಮ್ಮೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಭಾರತ ಮಹಿಳೆಯರ ‘ಎ’ ತಂಡ ಇಂಗ್ಲೆಂಡ್ ಎದುರಿನ ಎರಡನೇ ಅಭ್ಯಾಸ ಪಂದ್ಯದಲ್ಲಿ ಮಂಗಳವಾರ ಆರು ವಿಕೆಟ್‌ಗಳಿಂದ ಸೋತಿತು.

ಇಂಗ್ಲೆಂಡ್ ವಿರುದ್ಧದ ಮೊದಲ ಟ್ವೆಂಟಿ–20 ಕ್ರಿಕೆಟ್‌ ಅಭ್ಯಾಸ ಪಂದ್ಯದಲ್ಲಿಯೂ ಭಾರತ ‘ಎ’ ತಂಡ 45 ರನ್‌ಗಳಿಂದ ಸೋತಿತ್ತು.

ಮೊದಲು ಬ್ಯಾಟ್ ಮಾಡಿದ ಭಾರತ ‘ಎ’ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 85 ರನ್ ಕಲೆಹಾಕಿತು.

ಇಂಗ್ಲೆಂಡ್ ತಂಡಕ್ಕೆ ಇದು ಸವಾಲಿನ ಮೊತ್ತ ಎನಿಸಲಿಲ್ಲ. ಪೂರ್ತಿ ಇನಿಂಗ್ಸ್ ಆಡಿದ ಈ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 210 ರನ್ ಗಳಿಸಿತು.

ಕಾಡಿದ ಸೀವರ್: ಇಂಗ್ಲೆಂಡ್ ತಂಡಕ್ಕೆ ಡೇನಿಯೆಲ್ ವ್ಯಾಟ್ (46, 25ಎ, 9ಬೌಂ) ಉತ್ತಮ ಆರಂಭ ನೀಡಿದರು. ಭಾರತದ ಬೌಲರ್‌ಗಳನ್ನು ಕಾಡಿದ ನತಾಲಿ ಸೀವರ್‌ (54, 35ಎ, 9ಬೌಂ) ಅಮೋಘ ಇನಿಂಗ್ಸ್ ಕಟ್ಟಿದರು.

ಭಾರತದ ಬೌಲರ್‌ಗಳು ಎಷ್ಟೇ ಬೆವರು ಹರಿಸಿದರೂ ವಿಕೆಟ್ ಬೀಳಲಿಲ್ಲ. ಶಾಂತಿ ಕುಮಾರಿ (34ಕ್ಕೆ2) ಅವರನ್ನು ಹೊರತುಪಡಿಸಿ ಉಳಿದ ಬೌಲರ್‌ಗಳು ಮಿಂಚಲಿಲ್ಲ.

ವನಿತಾ ಏಕಾಂಗಿ ಹೋರಾಟ: ಕರ್ನಾಟಕದ ವಿ.ಆರ್‌.ವನಿತಾ (40, 51ಎ, 7ಬೌಂ) ಭಾರತ ತಂಡ ಗೌರವದ ಮೊತ್ತ ಕಲೆಹಾಕುವಲ್ಲಿ ನೆರವಾದರು. 29ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ತಂಡ ಸಂಕಷ್ಟದಲ್ಲಿದ್ದ ವೇಳೆ ಅವರು ಉತ್ತಮ ಇನಿಂಗ್ಸ್ ಕಟ್ಟಿದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ವುಮನ್‌ಗಳು ಅವರಿಗೆ ನೆರವು ನೀಡಲಿಲ್ಲ. ಮೂವರು ಆಟಗಾರ್ತಿಯರು ಖಾತೆ ತೆರೆಯದೇ ಔಟಾದರು. ಆರಂಭಿಕ ಆಟಗಾರ್ತಿ ಹಾಗೂ ಮೇಘನಾ ಕೂಡ ಕೆಟ್ಟ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದರು.

ಅರುಂಧತಿ ರೆಡ್ಡಿ ದಾಖಲಿಸಿದ 10ರನ್ ಭಾರತ ತಂಡದ ಬ್ಯಾಟ್ಸ್‌ವುಮನ್‌ಗಳ ಎರಡನೇ ಅಧಿಕ ಸ್ಕೋರ್ ಎನಿಸಿತು.

ಇಂಗ್ಲೆಂಡ್‌ ಬೌಲರ್ ಕಾಟಿ ಜಾರ್ಜ್‌ ಭಾರತದ ಆಟಗಾರ್ತಿಯರಿಗೆ ಸಿಂಹ ಸ್ವಪ್ನರಾದರು.

ಮೂರು ಓವರ್ ಮಾತ್ರ ಬೌಲಿಂಗ್ ಮಾಡಿದ ಅವರು ಕೇವಲ ಆರು ರನ್ ನೀಡಿ 4 ವಿಕೆಟ್ ಪಡೆದರು.

ಡೇನಿಯೆಲ್‌ ವೈಟ್ (7ಕ್ಕೆ2) ಕೂಡ ಪರಿಣಾಮಕಾರಿ ಬೌಲಿಂಗ್ ಸಾಮರ್ಥ್ಯ ಮಾಡಿದರು.

ಸಂಕ್ಷಿಪ್ತ ಸ್ಕೋರು

ಭಾರತ ‘ಎ’: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 85 (ವಿ.ಆರ್. ವನಿತಾ 40; ಕ್ಯಾಥಿ ಜಾರ್ಜ್‌ 6ಕ್ಕೆ4).

ಇಂಗ್ಲೆಂಡ್‌: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 210 (ನತಾಲಿ ಸೀವರ್‌ 54, ಶಾಂತಿ ಕುಮಾರಿ 34ಕ್ಕೆ2).

ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 6 ವಿಕೆಟ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry