ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಳಮಟ್ಟದಿಂದ ಪಕ್ಷದ ಸಶಕ್ತೀಕರಣ

ಹುನಗುಂದ: ಬಿಜೆಪಿ ಬೂತ್‌ಮಟ್ಟದ ಸಭೆ–ದೊಡ್ಡನಗೌಡ ಪಾಟೀಲ ಅಭಿಮತ
Last Updated 21 ಮಾರ್ಚ್ 2018, 7:02 IST
ಅಕ್ಷರ ಗಾತ್ರ

ಇಳಕಲ್: ‘ಬಿಜೆಪಿ ಕೇಂದ್ರದಲ್ಲಿ ಹಾಗೂ 21 ರಾಜ್ಯಗಳಲ್ಲಿ ಇಂದು ಅಧಿಕಾರದಲ್ಲಿರುವುದಕ್ಕೆ ಕಾರ್ಯಕರ್ತರ ಪರಿಶ್ರಮ ಹಾಗೂ ನರೇಂದ್ರ ಮೋದಿ ಅವರ ನಾಯಕತ್ವ ಕಾರಣ’ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ನಗರದ ಆರ್. ವೀರಮಣಿ ಸಾಂಸ್ಕೃತಿಕ ಭವನದಲ್ಲಿ ಬಿಜೆಪಿ ಹುನಗುಂದ ತಾಲ್ಲೂಕು ಘಟಕದಿಂದ ಹಮ್ಮಿಕೊಂಡಿದ್ದ ಬೂತ್ ಮಟ್ಟದ ಸಶಕ್ತೀಕರಣ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನಿರ್ದೇಶನದಂತೆ ಪಕ್ಷವನ್ನು ತಳಮಟ್ಟದಲ್ಲಿ ಸಶಕ್ತಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಪಕ್ಷದ ಸಂಘಟನೆ ವಿಷಯದಲ್ಲಿ ಅಮಿತ್‌ ಶಾ ನಡೆ ಹಾಗೂ ದೂರದೃಷ್ಟಿ ಅದ್ಭುತ ವಾಗಿದೆ. ಹುನಗುಂದ ಕ್ಷೇತ್ರದ ಮತಗಟ್ಟೆ ಗಳಲ್ಲಿ ಪಕ್ಷದ ಕಾರ್ಯಕರ್ತರು ಸಕ್ರಿಯರಾಗಿ ದ್ದಾರೆ’ ಎಂದರು.

ಸಭೆ ಉದ್ಘಾಟಿಸಿದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಶ್ಯಾಮ್‌ಜಿ ಜಾಜು ಮಾತನಾಡಿ, ‘ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸು ವಂತೆ ಮಹಾತ್ಮ ಗಾಂಧೀಜಿ ಸಲಹೆ ನೀಡಿದ್ದರು. ಆದರೆ ಆಗ ಪಕ್ಷದ ಬಗೆಗೆ ದೇಶದ ಜನರಿಗಿದ್ದ ಸದಭಿಪ್ರಾಯವನ್ನು ನೆಹರು ಕುಟುಂಬ ಸ್ವಹಿತಾಸಕ್ತಿಗೆ ಬಳಸಿಕೊಂಡಿದೆ. ದೇಶವನ್ನು ಕಾಂಗ್ರೆಸ್‌ ಮುಕ್ತ ಮಾಡುವ ಮೂಲಕ ಗಾಂಧೀಜಿ ಆಶಯವನ್ನು ಮೋದಿ ಈಡೇರಿಸುತ್ತಿದ್ದಾರೆ’ ಎಂದರು.

ಇದೇ ಸಂದರ್ಭದಲ್ಲಿ ಜಾಜು ಅವರನ್ನು ಬಿಜೆಪಿ ಹುನಗುಂದ ತಾಲ್ಲೂಕು ಘಟಕದ ಪರವಾಗಿ ದೊಡ್ಡನಗೌಡ ಪಾಟೀಲ ಸನ್ಮಾನಿಸಿದರು. ಈ ಸಭೆಯಲ್ಲಿ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಮತಗಟ್ಟೆ ಮಟ್ಟದ ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು ಪಾಲ್ಗೊಂಡಿದ್ದರು.

ವೇದಿಕೆಯ ಮೇಲೆ ವಿಧಾನಪರಿಷತ್‌ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಮನೋಹರ ಶಿರೋಳ, ಶ್ಯಾಮ ಕರವಾ, ಮುತ್ತಣ್ಣ ಮುರಾಳ, ಜಿಲ್ಲಾ ಪಂಚಾಯ್ತಿ ಸದಸ್ಯ ವೀರೇಶ ಉಂಡೋಡಿ, ಮುಕ್ಕಣ ಮುಕ್ಕಣ್ಣವರ, ಮಹಾಂತಗೌಡ ತೊಂಡಿಹಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT