‘ವಿಶೇಷ ಅನುದಾನ ಕ್ಷೇತ್ರಕ್ಕೆ ಬಂದಿಲ್ಲ’

7
ಲೋಕಾಪುರದಲ್ಲಿ ಗ್ರಾಮ ವಿಕಾಸ ಯೋಜನೆ ಕಾಮಗಾರಿಗೆ ಶಾಸಕ ಕಾರಜೋಳ ಚಾಲನೆ

‘ವಿಶೇಷ ಅನುದಾನ ಕ್ಷೇತ್ರಕ್ಕೆ ಬಂದಿಲ್ಲ’

Published:
Updated:
‘ವಿಶೇಷ ಅನುದಾನ ಕ್ಷೇತ್ರಕ್ಕೆ ಬಂದಿಲ್ಲ’

ಲೋಕಾಪುರ: ‘ಗ್ರಾಮದ ಅಭಿವೃದ್ಧಿಗೆ ಗ್ರಾಮ ವಿಕಾಸ ಯೋಜನೆ ಮಂಜೂ ರಾಗಿದ್ದು ಈ ಯೋಜನೆಯಿಂದ ಲೋಕಾಪುರ ಸರ್ವಾಂಗೀಣ ವಿಕಾಸ ಹೊಂದಲಿದೆ ಎಂದು ಶಾಸಕ ಗೋವಿಂದ ಕಾರಜೋಳ ತಿಳಿಸಿದರು.

2015–16ನೇ ಸಾಲಿನ ಗ್ರಾಮ ವಿಕಾಸ ಯೋಜನೆ ಶಾಸಕರ ಅನು ದಾನದಡಿಯಲ್ಲಿ ಮಂಜೂರಾದ ಕಾಮ ಗಾರಿ, ಸಿ.ಸಿ.ರಸ್ತೆ ಭೂಮಿಯ ಪೂಜೆ ನೆರವೇರಿಸಿ ಮಾತನಾಡಿದರು.

ಈ ಯೋಜನೆಯಲ್ಲಿ ರಸ್ತೆಗಳ ಸುಧಾರಣೆ, ರಂಗಮಂದಿರ, ದೇವ ಸ್ಥಾನದ ಜೀರ್ಣೋದ್ಧಾರ, ಸೌರ ಬೆಳಕು ಮುಂತಾದ ಅಭಿವೃದ್ಧಿ ಪರ ಕಾರ್ಯಗಳು ನಡೆಯಲಿವೆ. ಗುಣಮಟ್ಟದಿಂದ ಕಾಮಗಾರಿಯನ್ನು ಕೈಗೊಂಡು ನಿಗದಿತ ಅವಧಿಯೊಳಗೆ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ‘ಗ್ರಾಮವು ಅಭಿವೃದ್ಧಿ ಹೊಂದ ಬೇಕಾದರೆ ತಮ್ಮಲ್ಲಿರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು, ಅಭಿವೃದ್ಧಿಗೆ ಎಲ್ಲರೂ ಒಂದಾಗಬೇಕು. ಒಗ್ಗಟ್ಟಿನಿಂದ ಮಾತ್ರ ಗ್ರಾಮದ ಅಭಿವೃಧ್ಧಿ ಸಾಧ್ಯವಿದೆ’ ಎಂದರು.

‘₹ 20 ಕೋಟಿ ವೆಚ್ಚದಲ್ಲಿ ಘಟಪ್ರಭಾ ನದಿಯಿಂದ ವರ್ಚಗಲ್ ಕರೆಗೆ ಕುಡಿಯುವ ನೀರಿನ ಸೌಲಭ್ಯವನ್ನು ಸುತ್ತಮುತ್ತಲಿನ ಗ್ರಾಮಕ್ಕೆ ನನ್ನ ವಿಧಾನಸಭಾ ಕ್ಷೇತ್ರ ಅನುದಾನದಲ್ಲಿ ಬಿಡುಗಡೆ ಮಾಡಿದೆ. ಬೇರೆ ಯಾವುದೇ ಅನುದಾನವಿಲ್ಲ, ಯಾರದ್ದೂ ಈ ಕಾಮಗಾರಿಗೆ ಕೊಡುಗೆ ಇಲ್ಲ ವಿನಾಕಾರಣ ನನ್ನ ಅನುದಾದನದಲ್ಲಿ ಬಿಡುಗಡೆಯಾಗಿದೆ ಅಂತಾ ಭೂಮಿ ಪೂಜೆ ಮಾಡಿ ಭಾವಚಿತ್ರ ತೆಗೆಸಿಕೊಂಡು ಪೇಪರಿನಲ್ಲಿ ಹಾಕಿದರೆ ಇದನ್ನು ಜನ ಒಪ್ಪುವುದಿಲ್ಲ’ ಎಂದು ಪರೋಕ್ಷವಾಗಿ ಕಾಂಗ್ರೆಸ್ ಮುಖಂಡರನ್ನು ಟೀಕಿಸಿದರು.

‘ಬೇರೆ ಯಾರಾದರೂ ತಮ್ಮ ಸ್ವಂತ ಬಲದಿಂದ ಸರ್ಕಾರದಿಂದ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರೆ ಅದನ್ನು ಸ್ವಾಗತಿಸುತ್ತೇನೆ. ಇಲ್ಲ, ಸಲ್ಲದ ಕಾಮಗಾರಿ ನಾನೇ ಮಾಡಿದ್ದೇನೆ ಅಂತ ಸಾರ್ವಜನಿಕರಿಗೆ ಸುಳ್ಳು ಹೇಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ’ ಎಂದು ಹೇಳಿದರು.

ಕೆ.ಆರ್.ಮಾಚಪ್ಪನವರ, ಆರ್.ಟಿ.ಪಾಟೀಲ, ಲೋಕಣ್ಣ ಕತ್ತಿ, ಬಿ.ಬಿ.ನಾಡಗೌಡ, ವಿರೇಶ ಪಂಚಕಟ್ಟಿಮಠ, ಕಾಶಲಿಂಗ ಮಾಳಿ, ಶ್ರೀನಿವಾಸ ಹೂಗಾರ, ಪ್ರಕಾಶ ಚುಳಕಿ, ಬಾಳಾಸಾಹೇಬ ದೇಸಾಯಿ, ಮಹಾಂತೇಶ ಲಮಾಣಿ, ರವಿ ಖಜ್ಜಿಡೋಣಿ, ಕೃಷ್ಣಾ ಹಂಚಾಟೆ, ಜಾಕೀರ ಅತ್ತಾರ, ಮುಂತಾದವರು ಇದ್ದರು.

‘ವಿಶೇಷ ಅನುದಾನ ಆದೇಶ ತೋರಿಸಿ’

‘ವಿಶೇಷ ಅನುದಾನ ನಮ್ಮ ಕ್ಷೇತ್ರಕ್ಕೆ ಬಂದಿಲ್ಲ, ಬಂದಿದ್ದರೆ ಅದರ ಆದೇಶವನ್ನು ತಂದು ತೋರಿಸಲಿ’ ಎಂದು ಶಾಸಕ ಗೋವಿಂದ ಕಾರಜೋಳ ಸವಾಲು ಹಾಕಿದರು.

‘ಸ್ವಾತಂತ್ರ್ಯ ಬಂದು 70 ವರ್ಷವಾಯಿತು ಯಾರ ಅವಧಿಯಲ್ಲಿ ಎಷ್ಟು ಸಾರ್ವಜನಿಕ ಕಾರ್ಯ ಆಗಿವೆ ಎಂದು ತಾಳೆ ಮಾಡಿ ನೋಡಿ. ರಾಜ್ಯದಲ್ಲಿ ಈಗಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 3700 ರೈತರ ಆತ್ಮ ಹತ್ಯೆ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು, 12,281 ಎಸ್.ಸಿ ಎಸ್.ಟಿ ದೌರ್ಜನ್ಯ ಪ್ರಕರಣ ದಾಖಲಾಗಿವೆ. ಇದರಲ್ಲಿ ಕೇವಲ 39 ಪ್ರಕರಣದಲ್ಲಿ ಮಾತ್ರ ಶಿಕ್ಷೆಯಾಗಿವೆ. ಇದೇ ಸಿದ್ದರಾಮಯ್ಯನವರ ಸರ್ಕಾರದ ಎಂದು ಸಾಧನೆ’ ಎಂದು ವ್ಯಂಗ್ಯವಾಡಿದರು.

**

ನಾವು ಮಾಡುತ್ತಿರುವ ಅಭಿವೃದ್ಧಿ ಕೆಲಸವನ್ನು ತಮ್ಮವು ಎಂದು ಕೆಲವರು ಹೇಳಿಕೊಂಡು ತಿರುಗುತ್ತಿರುವುದನ್ನು ಜನ ಗಮನಿಸುತ್ತಿದ್ದಾರೆ

- ಗೋವಿಂದ ಕಾರಜೋಳ, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry