ಎಸಿಬಿ ದಾಳಿ: ಅಪಾರ ಪ್ರಮಾಣದ ಆಸ್ತಿ ವಶಕ್ಕೆ

7

ಎಸಿಬಿ ದಾಳಿ: ಅಪಾರ ಪ್ರಮಾಣದ ಆಸ್ತಿ ವಶಕ್ಕೆ

Published:
Updated:

ಧಾರವಾಡ: ಕಲಬುರ್ಗಿಯಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಸುರಕ್ಷತೆ ಮತ್ತು ವಿಚಕ್ಷಣ ದಳದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಪತಿ ದೊಡ್ಡಲಿಂಗಣ್ಣನವರ ಮನೆಯ ಮೇಲೆ ಮಂಗಳವಾರ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು.

ಇಲ್ಲಿನ ಮೂಕಾಂಬಿಕಾ ನಗರದಲ್ಲಿರುವ ಶ್ರೀಪತಿ ಅವರ ಮನೆ, ಹೊಸ ನಿಲ್ದಾಣದ ಬಳಿ ಇರುವ ಶ್ರೀಪತಿ ಅವರ ಮಾವನ ಮನೆ ಮೇಲೆ ಏಕ‌ಕಾಲಕ್ಕೆ ಧಾರವಾಡ ಎಸಿಬಿ ದಳದ ಡಿವೈಎಸ್‌ಪಿ ವಿಜಯಕುಮಾರ ಬಿಸನಳ್ಳಿ ನೇತೃತ್ವದ ತಂಡ 3 ಗಂಟೆಗಳ ಕಾಲ ದಾಖಲೆಗಳ ಪರಿಶೀಲನೆ ನಡೆಸಿತು.

ಅಪಾರ ಪ್ರಮಾಣದ ಆಸ್ತಿ ಪತ್ರಗಳು ಹಾಗೂ ಬಂಗಾರದ ಆಭರಣಗಳು ಪತ್ತೆಯಾಗಿವೆ. ಅಮಾನ್ಯಗೊಂಡ ಹಳೆಯ ₹ 500, ₹ 1000 ಮುಖ ಬೆಲೆಯ ನೋಟುಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry