ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪರ ಆಡಳಿತ ನೀಡಿರುವ ರಾಜ್ಯ ಸರ್ಕಾರ: ಪಾಟೀಲ

Last Updated 21 ಮಾರ್ಚ್ 2018, 9:30 IST
ಅಕ್ಷರ ಗಾತ್ರ

ಗಜೇಂದ್ರಗಡ: ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕಾಮಗಾರಿಗಳನ್ನು ಮೆಚ್ಚಿ ನೂರಾರು ಜನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಭಾನುವಾರ ಸಂಜೆ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳನ್ನು ತೊರೆದ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು ಎಲ್ಲ ವರ್ಗದ ಜನರಿಗೂ ತಲುಪುವ ಯೋಜನೆಗಳಾಗಿವೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಐದು ವರ್ಷಗಳಲ್ಲಿ ಈಡೇರಿಸಿ ನುಡಿದಂತೆ ನಡೆದ ಸರ್ಕಾರ ಎಂಬ ಖ್ಯಾತಿಗೆ ರಾಜ್ಯ ಸರ್ಕಾರ ಪಾತ್ರವಾಗಿದೆ ಎಂದರು.

ಬಸವರಾಜ ಶಿಲವಂತರ, ಸಿದ್ದಲಿಂಗಪ್ಪ ಕನಕೇರಿ, ಮೊಹನ ಕನಕೇರಿ, ಸಂತೋಷ ಕತ್ತಿಶೆಟ್ಟರ, ತುಕಾರಾಂ ಜಿಂಗಾಡೆ, ಶಿವಪ್ಪ ಪಮ್ಮಾರ, ಪರಸಪ್ಪ ಚಳಗೇರಿ, ರಾಜಕುಮಾರ ಜಿಂಗಾಡೆ, ವಿರೇಶ ಚಳಗೇರಿ, ವಿರೂಪಾಕ್ಷಪ್ಪ ಚಿನಿವಾಲರ, ಭೀಮಶಿ ಇಟಗಿ, ಮಹೇಶ ಕತ್ತಿಶೆಟ್ಟರ, ಬಸವರಾಜ ನಂದಿಹಾಳ, ಪ್ರಕಾಶ ಮಹೇಂದ್ರಕರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ವೀರಣ್ಣ ಸೊನ್ನದ, ತಾಲ್ಲೂಕು ಪಂಚಾಯ್ತಿ ಸದಸ್ಯ ಶಶಿಧರ ಹೂಗಾರ, ವೀರಣ್ಣ ಶೆಟ್ಟರ, ಪುರಸಭೆ ಅಧ್ಯಕ್ಷೆ ಸುಜಾತಾ ಚುಂಚಾ, ಪುರಸಭೆ ಸದಸ್ಯರಾದ ಶಿವರಾಜ ಘೊರ್ಪಡೆ, ಶಾರದಾ ರಾಠೋಡ, ಮುರ್ತುಜಾ ಢಾಲಾಯತ, ಕೊಟ್ರೇಶ ಚಿಲಕಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT