ಖಜೂರಿಯಲ್ಲಿ ಏ. 13ರಂದು ಸಾಹಿತ್ಯ ಸಮ್ಮೇಳನ

7
ಸಮ್ಮೇಳನಾಧ್ಯಕ್ಷರಾಗಿ ಶಿವಶಾಂತರೆಡ್ಡಿ, ಸಂಜೀವನ ದೇಶಮುಖ ಆಯ್ಕೆ

ಖಜೂರಿಯಲ್ಲಿ ಏ. 13ರಂದು ಸಾಹಿತ್ಯ ಸಮ್ಮೇಳನ

Published:
Updated:

ಆಳಂದ: ತಾಲ್ಲೂಕಿನ ಗಡಿಗ್ರಾಮ ಖಜೂರಿಯ ಕೋರಣೇಶ್ವರ ಮಠದಲ್ಲಿ ಏ. 13ರಂದು ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಜಾನಪದ ಪರಿಷತ್ತಿನ ಜಂಟಿ ತಾಲ್ಲೂಕು ಸಮ್ಮೇಳನ ನಡೆಯಲಿದೆ ಎಂದು ತಾಲ್ಲೂಕು ಅಧ್ಯಕ್ಷ ಅಪ್ಪಾಸಾಹೇಬ ತೀರ್ಥೆ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.

ನಿವೃತ್ತ ಕೃಷಿ ಅಧಿಕಾರಿ, ಸಾಹಿತಿ ಶಿವಶಾಂತರೆಡ್ಡಿ ಮುನ್ನೋಳ್ಳಿ ಅವರನ್ನು ವಚನ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಾಗೂ ಕಲಾವಿದ ಸಂಜೀವನ ದೇಶಮುಖ ಖಜೂರಿ ಅವರನ್ನು ಜಾನಪದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಮಾತನಾಡಿದರು.

ಖಜೂರಿ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ, ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು ಅವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಶಿವಶಾಂತರೆಡ್ಡಿ, ಸಂಜೀವನ ದೇಶಮುಖ ಅವರನ್ನು ಸನ್ಮಾನಿಸಿದರು.

ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಣ್ಣಾ, ಸಾಹಿತಿ ಪ್ರೊ.ಶಿವರಾಜ ಪಾಟೀಲ, ರಾಜಶೇಖರ ಹರಿಹರ, ಧರ್ಮಣ್ಣಾ ಪೂಜಾರಿ, ನಿಂಗಣ್ಣಾ ಮುಂಗೋಡಿ, ಮಂಜುನಾಥ ಕಂದಗೂಳೆ, ಕಾರ್ಯದರ್ಶಿಗಳಾದ ಡಿ.ಎಂ.ಪಾಟೀಲ, ವೀರಭದ್ರಪ್ಪ ಹಾರಕೆ, ಚನ್ನಮಲ್ಲಯ್ಯ ಕಠಾರಿಮಠ, ವಿಶ್ವನಾಥ ಭಕರೆ, ರಮೇಶ ಮಾಡಿಯಾಳಕರ, ಧರ್ಮಣ್ಣಾ ಧನ್ನಿ, ಸಂಜಯ ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry