7

ಗೂಗಲ್ ನಕ್ಷೆಯಲ್ಲಿ ಹೆಸರು ಬದಲಾವಣೆ: ದೂರು

Published:
Updated:

ಯಲ್ಲಾಪುರ: ಪಟ್ಟಣದ ಕಾಳಮ್ಮನಗರ ಹೆಸರನ್ನು ತೆಗೆದು ‘ಟಿಪ್ಪುನಗರ’ ಎಂದು ಗೂಗಲ್ ಮ್ಯಾಪ್‌ನಲ್ಲಿ ನಮೂದಿಸಿದ್ದಾರೆ ಎಂದು ಸ್ಥಳೀಯ ಮುಖಂಡರು ಯಲ್ಲಾಪುರ ಪೊಲೀಸ್ ಠಾಣೆಗೆ ಸೋಮವಾರ ದೂರು ನೀಡಿದ್ದಾರೆ.

ಕಾಳಮ್ಮ ನಗರವು ಅತ್ಯಂತ ದೊಡ್ಡ ಪ್ರದೇಶವಾಗಿದೆ. ಕಳೆದ ಬಾರಿಯೂ ಇದೇ ರೀತಿ ಘಟನೆಯಾಗಿದ್ದು, ಅನೇಕರು ಹೋರಾಟ ನಡೆಸಿ ‘ಕಾಳಮ್ಮ ನಗರ’ ಎಂದು ಉಳಿಸಿಕೊಳ್ಳಲಾಗಿತ್ತು. ಆದರೆ, ಕಿಡಿಗೇಡಿಗಳು ಮತ್ತೆ ಹೆಸರು ಬದಲಾಯಿಸಿದ್ದಾರೆ. ಪದೇಪದೇ ಈ ರೀತಿ ಮಾಡಲಾಗುತ್ತಿದ್ದು, ಕೆಲವರು ಶಾಂತಿ ಕದಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಯುವವಾಹಿನಿ, ತ್ರಿಶೂಲ್ ಬಳಗ ಮತ್ತು ಬಿಜೆಪಿಯ ಮುಖಂಡರಾದ ಮಹೇಶ ನಾಯ್ಕ, ಸೊಮೇಶ್ವರ ನಾಯ್ಕ, ದಿಲೀಪ ಅಂಬಿಗ, ರಮೇಶ ಕಮ್ಮಾರ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry