ಆರೋಗ್ಯಕ್ಕೆ ಸ್ಮಾರ್ಟ್ ಹಚ್ಚೆ

7

ಆರೋಗ್ಯಕ್ಕೆ ಸ್ಮಾರ್ಟ್ ಹಚ್ಚೆ

Published:
Updated:
ಆರೋಗ್ಯಕ್ಕೆ ಸ್ಮಾರ್ಟ್ ಹಚ್ಚೆ

ತಮ್ಮ ಆಲೋಚನೆಗಳ ಅಭಿವ್ಯಕ್ತಿಗೆ ಟ್ಯಾಟೂ ಹಾಕಿಸಿಕೊಳ್ಳುವ ಕೆಲವ ರನ್ನು ನೋಡಿರುತ್ತೇವೆ. ಇನ್ನೂ ಕೆಲವರು ಫ್ಯಾಷನ್‌ಗೆ ಹಾಕಿಸಿ ಕೊಳ್ಳುತ್ತಾರೆ. ಇನ್ನು ಮುಂದೆ ಆರೋಗ್ಯ ಹೇಗಿದೆ ಎಂದು ಕಂಡುಕೊಳ್ಳಲೂ ಟ್ಯಾಟೂ ಹಾಕಿಸಿಕೊಳ್ಳಬೇಕಾಗಬಹುದು.

ದೇಹದಲ್ಲಿನ ಗ್ಲೂಕೋಸ್‌, ಸೋಡಿಯಂ ಹಾಗೂ ಪಿಎಚ್ ಮಟ್ಟವನ್ನು ಕಂಡುಕೊಳ್ಳುವುದು ಇಂಥದ್ದೊಂದು ಟ್ಯಾಟೂ ಇಂದ ಸಾಧ್ಯವಾಗಿದೆ. ಈ ಪ್ರಯೋಗ ಮಾಡಿರುವುದು ಹಾರ್ವರ್ಡ್ ಹಾಗೂ ಮೆಸಾಚುಸೆಟ್‌ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು. ‘ಡರ್ಮಲ್ ಅಬಿಸ್ ಟ್ಯಾಟೂ’ ಪ್ರಾಜೆಕ್ಟ್‌ನ ಸಲುವಾಗಿ ಈ ಪ್ರಯೋಗ ನಡೆದಿದೆ.

ಮೊದಲು ಈ ಟ್ಯಾಟೂಗೆಂದು ವಿಶೇಷ ಬಯೋಸೆನ್ಸಿಟಿವ್ ಇಂಕ್ ಸಿದ್ಧಗೊಳಿಸಲಾಗಿತ್ತು.

ಮೊದಲು ಹಸಿರು ಬಣ್ಣದ ಇಂಕ್ ಕಂಡುಕೊಳ್ಳಲಾಗಿದೆ. ಗ್ಲೂಕೋಸ್ ಮಟ್ಟ ಹೆಚ್ಚುತ್ತಿದ್ದಂತೆ ಹೆಚ್ಚೆಯ ಹಸಿರು ಬಣ್ಣ ಕಂದು ಬಣ್ಣಕ್ಕೆ ತಿರುಗುತ್ತದೆ. ಸೋಡಿಯಂ ಮಟ್ಟ ಹೆಚ್ಚುತ್ತಿದ್ದಂತೆ, ಬಣ್ಣ ಬದಲಾಗಿ ನಿರ್ಜಲೀಕರಣ ಆಗುತ್ತಿರುವುದನ್ನು ಸೂಚಿಸುತ್ತದೆ.

ಹೀಗೆ ಒಂದೊಂದು ಬಣ್ಣವನ್ನು ಒಂದೊಂದು ಸಮಸ್ಯೆಯ ಸೂಚಕವಾಗಿ ಕಂಡುಕೊಳ್ಳಲು ಸಂಶೋಧಕರು ಇನ್ನಷ್ಟು ಪರೀಕ್ಷೆಗಳನ್ನೂ ನಡೆಸುತ್ತಿದ್ದಾರೆ. ದೇಹದಲ್ಲಿ ಆಗುವ ಬದಲಾವಣೆಗೆ ತಕ್ಕಂತೆ ಬಣ್ಣ ಬದಲಿಸುವ ಮೂಲಕ ಸಮಸ್ಯೆಯ ಸೂಚನೆಯನ್ನೂ ಪಡೆಯಬಹುದು.

ಈ ರೀತಿಯ ಪ್ರಯೋಗವೊಂದು 2015ರಲ್ಲಿಯೇ ನಡೆದಿತ್ತು. ಸಂಶೋಧಕ ಜಾನ್ ರಾಗರ್ಸ್, ಹೃದಯ ಸ್ವಾಸ್ಥ್ಯವನ್ನು ಪರೀಕ್ಷಿಸಲು, ಎಲ್‌ಸಿಡಿ ಟ್ಯಾಟೂಗಳನ್ನು ಬಳಸಿ, ದೇಹದಲ್ಲಿ ರಕ್ತ ಪರಿಚಲನೆಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದರು. ಬದಲಾಗುವ ದೇಹದ ಉಷ್ಣಾಂಶಕ್ಕೆ ತಕ್ಕುದಾಗಿ ಬಣ್ಣ ಬದಲಿಸುವ ಟ್ಯಾಟೂ ಮೂಲಕ ರಕ್ತಪರಿಚಲನೆಯ ಮಟ್ಟವನ್ನು ತಿಳಿದುಕೊಳ್ಳಬಹುದಿತ್ತು.

ಟ್ಯಾಟೂ ಅಷ್ಟೇ ಅಲ್ಲ, ಇಂಥದ್ದೊಂದು ಪ್ರಯೋಗವನ್ನು ಬಾರ್‌ಕೋಡ್ ಹಾಗೂ ಕ್ಯೂ ಆರ್‌ ಕೋಡ್‌ ಮೂಲಕವೂ ಮಾಡುವ ಸಾಧ್ಯತೆಯನ್ನೂ ಹುಡುಕುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry