ಏ.6 ರಿಂದ ಮಲೆಯಾಳಿ ಕ್ರಿಕೆಟ್ ಟೂರ್ನಿ

7

ಏ.6 ರಿಂದ ಮಲೆಯಾಳಿ ಕ್ರಿಕೆಟ್ ಟೂರ್ನಿ

Published:
Updated:

ಗೋಣಿಕೊಪ್ಪಲು: ‘ಮಲೆಯಾಳಿ ಜನರಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಏ. 6 ರಿಂದ 8ರವರೆಗೆ ಏಳನೇ ವರ್ಷದ ಜಿಲ್ಲಾ ಮಟ್ಟದ ಕೊಡಗು ಮಲಯಾಳಿ ಕ್ರಿಕೆಟ್ ಟೂರ್ನಿ ಏರ್ಪಡಿಸಲಾಗಿದೆ’ ಎಂದು ಹಿಂದೂ ಮಲಯಾಳಿ ಸಂಘದ ಗೋಣಿಕೊಪ್ಪಲು ಘಟಕದ ಅಧ್ಯಕ್ಷ ಶರತ್‌ಕಾಂತ್‌ ಮಂಗಳವಾರ ಹೇಳಿದರು.

ಜಿಲ್ಲಾ ಹಿಂದೂ ಮಲಯಾಳಿ ಸಂಘ ಹಾಗೂ ಅಮ್ಮತ್ತಿ ಕಾರ್ಮಾಡು ಜೈ ಶ್ರೀರಾಮ್ ಮಲಯಾಳಿ ಸಂಘದ ಆಶ್ರಯದಲ್ಲಿ ಕ್ರೀಡಾಕೂಟ ನಡೆಯಲಿದೆ. ಅಮ್ಮತ್ತಿ ಜಿಯಂಪಿ ಶಾಲಾ ಮೈದಾನದಲ್ಲಿ ಉತ್ಸವ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಘಟನಾ ಕಾರ್ಯದರ್ಶಿ ರತೀಶ್ ಅವರು, ‘ಕ್ರೀಡಾ ಉತ್ಸವದಲ್ಲಿ 45ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಕಳೆದ ಬಾರಿ 40 ತಂಡಗಳಿದ್ದವು. ಹಿಂದೂ ಮಲಯಾಳಿ ಬಾಂಧವರಿಗಷ್ಟೇ ಭಾಗವಹಿಸಲು ಅವಕಾಶವಿದೆ’ ಎಂದು ಹೇಳಿದರು.

ಕ್ರೀಡಾ ಸಂಚಾಲಕ ಲಿಜೇಶ್ ಅವರು, ‘ಕ್ರಿಕೆಟ್ ಟೂರ್ನಿ ಜೊತೆಗೆ ಮಹಿಳೆಯರಿಗೆ ಹಗ್ಗಜಗ್ಗಾಟ, ಮಕ್ಕಳಿಗೆ ಆಟೋಟ, ಕೇರಳದ ಸಾಂಪ್ರದಾಯಿಕ ನೃತ್ಯ ಸೇರಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ’ ಎಂದು ವಿವರಿಸಿದರು.

ಟೂರ್ನಿ ವಿಜೇತರಿಗೆ ₨ 25 ಸಾವಿರ ನಗದು ಹಾಗೂ ಟ್ರೋಫಿ ಮತ್ತು ದ್ವಿತೀಯ ಸ್ಥಾನ ಪಡೆದವರಿಗೆ ರೂ 15 ಸಾವಿರ ನಗದು ಹಾಗೂ ಟ್ರೋಫಿ ವಿತರಿಸಲಾಗುತ್ತದೆ.

ಭಾಗವಹಿಸಲು ಬಯಸುವ ತಂಡಗಳು ಮಾರ್ಚ್‌ 28ರ ಒಳಗೆ ತಂಡದ ಹೆಸರು ನೋಂದಣಿ ಮಾಡಿಸಬೇಕು. ಹೆಚ್ಚಿನ ಮಾಹಿತಿಗೆ 9741917874ರಲ್ಲಿ ಸಂಪರ್ಕಿಸಬಹುದು. ಕಾರ್ಯದರ್ಶಿ ರವಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry