‘ರಾಯರಡ್ಡಿ ಸೋಲಿಸುವುದೇ ಗುರಿ’

7
ಮನೆ ಮನೆಗೆ ಕುಮಾರಣ್ಣ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ

‘ರಾಯರಡ್ಡಿ ಸೋಲಿಸುವುದೇ ಗುರಿ’

Published:
Updated:

ಯಲಬುರ್ಗಾ: ‘ರೈತರು, ಬಡವರ ಅಭಿವೃದ್ಧಿಗೆ ಶ್ರಮಿಸದ ಸಚಿವ ಬಸವರಾಜ ರಾಯರಡ್ಡಿ ಅವರನ್ನು ಮಂದಿನ ಚುನಾವಣೆಯಲ್ಲಿ ಸೋಲಿಸುವುದೇ ನಮ್ಮ ಗುರಿ’ ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಆರ್. ಶ್ರೀನಾಥ ಹೇಳಿದರು.

ತಾಲ್ಲೂಕಿನ ಚಿಕ್ಕಮನ್ನಾಪುರ ಗ್ರಾಮದಲ್ಲಿ ಜೆಡಿಎಸ್ ಈಚೆಗೆ ಹಮ್ಮಿಕೊಂಡಿದ್ದ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಯರಡ್ಡಿ ನೂರಾರು ಕೋಟಿ ಒಡೆಯರಾಗಿದ್ದಾರೆ. ಆದರೆ, ಕ್ಷೇತ್ರದ ಜನರು ಬಡವರಾಗಿಯೇ ಉಳಿದಿದ್ದಾರೆ. ತಾವು ಅಭಿವೃದ್ಧಿ ಹರಿಕಾರ ಎಂದು ಹೇಳಿಕೊಳ್ಳುವ ಅವರು ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ ಎಂದು ದೂರಿದರು.

ಜೆಡಿಎಸ್ ನಿಯೋಜಿತ ಅಭ್ಯರ್ಥಿ ವೀರನಗೌಡ ಬಳೂಟಗಿ ಮಾತನಾಡಿದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ಕರಂಡಿ, ವಕ್ತಾರ ಬಸವರಾಜ ಗುಳಗುಳಿ, ಪಟ್ಟಣ ಪಂಚಾಯಿತಿ ಸದಸ್ಯ ವಿಜಯಕುಮಾರ ಕರಂಡಿ, ಮುಖಂಡರಾದ ಅಂದಾನಗೌಡ ಪಾಟೀಲ, ಡಿ.ಕೆ.ಪರಶುರಾಮ ಛಲವಾದಿ, ಡಿ.ಲಂಕೇಶ, ರಾಜಶೇಖರ್ ಶ್ಯಾಗೋಟಿ, ಸಿದ್ದು ಮಣ್ಣಿನವರ್, ಶಶಿಧರ ಗಾಣಿಗೇರ, ಶಿವಪ್ಪ ತೊಗರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry