ನುಡಿದಂತೆ ನಡೆಯದ ಪ್ರಧಾನಿ ಮೋದಿ

7
ಜನಾಶೀರ್ವಾದ ಯಾತ್ರೆ: ಭಾವನಾತ್ಮಕವಾಗಿ ಜನರ ಸೆಳೆಯಲು ಪ್ರಯತ್ನಿಸಿದ ರಾಹುಲ್‌ ಗಾಂಧಿ

ನುಡಿದಂತೆ ನಡೆಯದ ಪ್ರಧಾನಿ ಮೋದಿ

Published:
Updated:
ನುಡಿದಂತೆ ನಡೆಯದ ಪ್ರಧಾನಿ ಮೋದಿ

ಉಡುಪಿ: ಮೀನುಗಾರರ ಸಮಸ್ಯೆ ಆಲಿಸಿ, ನಾರಾಯಣಗುರುಗಳ ಸಂದೇಶವನ್ನು ಕಾಂಗ್ರೆಸ್ ಬದ್ಧತೆಯೊಂದಿಗೆ ಸಮೀಕರಿ ಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಮೊದಲ ಭೇಟಿಯಲ್ಲಿಯೇ ಉಡುಪಿ ಜಿಲ್ಲೆಯ ಜನರನ್ನು ಭಾವ ನಾತ್ಮಕವಾಗಿ ಸೆಳೆಯುವ ಪ್ರಯತ್ನ ಮಾಡಿದರು.

ಕಾರ್ಯಕರ್ತನ ಮನೆಯಲ್ಲಿ ಕರಾವ ಳಿಗರ ಬಹು ನೆಚ್ಚಿನ ಖಾದ್ಯ ನೀರ್‌ ದೋಸೆ, ಸಿಗಡಿ ಗಸಿ ತಿಂದು ಬಾಯಿ ಚಪ್ಪರಿಸಿದ ಅವರು, ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡುವ ಮೂಲಕ ಮೀನುಗಾರರ ಬಾಯಲ್ಲಿಯೂ ನೀರೂರುವಂತೆ ಮಾಡಿ, ಮುಖದಲ್ಲಿ ಮಂದಹಾಸ ಮೂಡಿಸಿದರು. ಶಾಲಾ ಮಕ್ಕಳೊಂದಿಗೆ ಬೆರೆಯುವ ಮೂಲಕ ತಾನೊಬ್ಬ ಸಾಮಾನ್ಯ ವ್ಯಕ್ತಿ ಎಂಬ ಸಂದೇ ಶವನ್ನೂ ನೀಡುವ ಪ್ರಯತ್ನ ಮಾಡಿದರು.

3ನೇ ಹಂತದ ಜನಾಶೀರ್ವಾದ ಯಾತ್ರೆ ಭಾಗವಾಗಿ ಕಾಪುವಿನ ತೆಂಕ ಎರ್ಮಾಳ್‌ಗೆ ಮಂಗಳವಾರ ಬಂದಿದ್ದ  ಅವರು ರಾಜೀವ್ ಗಾಂಧಿ ರಾಜಕೀಯ ತರಬೇತಿ ಕೇಂದ್ರವನ್ನು ಉದ್ಘಾಟಿಸಿದರು. ಮೀನುಗಾರರೊಂದಿಗೆ ಸಂವಾದ ನಡೆಸಿದ ಅವರು ಪಡುಬಿದ್ರಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಭಾಷಣದುದ್ದಕ್ಕೂ ಮೊನಚು ಟೀಕೆಗಳಿಂದ ಕೇಂದ್ರ ಸರ್ಕಾ ರವನ್ನು ತಿವಿದರೆ, ಸಿದ್ದರಾಮಯ್ಯ ನೇತೃ ತ್ವದ ಕಾಂಗ್ರೆಸ್ ಸರ್ಕಾರದ ಸಾಧನೆಗೆ ಬಹುಪರಾಕ್ ಹೇಳಿ ಜನರಿಂದ ಚಪ್ಪಾಳೆ ಗಿಟ್ಟಿಸಿದರು.

‘ನುಡಿದಂತೆ ನಡೆ’ ಎಂಬ ಭಕ್ತಿ ಭಂಡಾರಿ ಬಸವಣ್ಣ ಅವರ ಮಾತನ್ನೂ ನೆನಪಿಸಿದ ಅವರು, ಆ ಮಾತಿಗೆ ಬದ್ಧ ವಾಗಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಮತ್ತೊಮ್ಮೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.

‘2014ರ ಚುನಾವಣೆಯ ಸಂದರ್ಭ ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಮುಖ್ಯ ಭರವಸೆಗಳನ್ನು ನೀಡಿ ದ್ದರು. ವಿದೇಶದಲ್ಲಿ ಇರುವ ಕಪ್ಪು ಹಣ ವನ್ನು ತಂದು ಪ್ರತಿ ಭಾರತೀಯನ ಬ್ಯಾಂಕ್ ಖಾತೆಗೆ ₹15 ಲಕ್ಷ ಹಾಕುತ್ತೇನೆ ಎಂದಿದ್ದರು. ಕನಿಷ್ಠ ಪಕ್ಷ ₹15 ಆದರೂ ಹಾಕಿದ್ದಾರ? ನಿರುದ್ಯೋಗ ಸಮಸ್ಯೆ ಬಗೆಹರಿಸಲು ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದ ಅವರು, ವಾರ್ಷಿಕ ಕೇವಲ 1 ಲಕ್ಷ ಉದ್ಯೋಗ ನೀಡಲಷ್ಟೇ ಶಕ್ತರಾಗಿ ದ್ದಾರೆ. ಕಳೆದ ಎಂಟು ವರ್ಷಗಳಲ್ಲಿಯೇ ಈ ವರ್ಷ ಅತ್ಯಂತ ಕಡಿಮೆ ಉದ್ಯೋಗ ಸೃಷ್ಟಿಯಾಗಿದೆ’ ಎಂದರು.

‘ರೈತರ ಬೆಳೆಗೆ ನ್ಯಾಯಯುತ ಬೆಲೆ ನೀಡುವ ವಾಗ್ದಾನವನ್ನೂ ಮೋದಿ ಈಡೇರಿಸಿಲ್ಲ. ಬೆಂಬಲ ಬೆಲೆ ನೀಡಿ ಎಂದರೆ ಅವರು ಉತ್ತರವನ್ನೇ ನೀಡುವುದಿಲ್ಲ. ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಿ ಎಂದರೆ ಸಾಧ್ಯವಿಲ್ಲ ಎಂದು ಪ್ರಧಾನಿ, ಅರುಣ್ ಜೇಟ್ಲಿ ಹೇಳುತ್ತಾರೆ. ಆದರೆ 15 ಉದ್ಯಮಿಗಳ ₹ 2.50 ಲಕ್ಷ ಕೋಟಿ ಸಾಲವನ್ನು ಅವರು ಮನ್ನಾ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ₹ 8 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದಾರೆ. ₹3 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ನೀಡುತ್ತಿದ್ದಾರೆ. ಕೇಂದ್ರಕ್ಕೆ ಏಕೆ ಇದು ಸಾಧ್ಯವಿಲ್ಲ’ ಎಂದು ಪ್ರಶ್ನಿಸಿದರು.

‘ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಎಷ್ಟು ಹಣವನ್ನು ನೀರಾವರಿಗೆ ಖರ್ಚು ಮಾಡಿದ್ದರೋ ಅದರ ಮೂರುಪಟ್ಟು ಹಣವನ್ನು ರಾಜ್ಯ ಸರ್ಕಾರ ಯೋಜನೆಗಳಿಗಾಗಿ ವಿನಿಯೋ ಗಿಸಿದೆ. ಹೆಣ್ಣು ಮಕ್ಕಳಿಗೆ ಸ್ನಾತಕೋತ್ತರ ಪದವಿ ವರೆಗೆ ರಾಜ್ಯ ಸರ್ಕಾರ ಉಚಿತ ಶಿಕ್ಷಣ ನೀಡುತ್ತಿದೆ’ ಎಂದು ರಾಹುಲ್ ಮೆಚ್ಚುಗೆ ವ್ಯಕ್ತಪಡಿಸಿದರು.

‘ನಿಮ್ಮ ತಂದೆ– ತಾಯಿಗಳು 70 ವರ್ಷಗಳ ಕಾಲ ಈ ದೇಶವನ್ನು ಕಟ್ಟಿ ಬೆಳೆಸಿದ್ದಾರೆ. ರೈತರು, ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಉದ್ಯಮಿಗಳು ದೇಶ ನಿರ್ಮಾಣಕ್ಕೆ ತಮ್ಮ ಬೆವರು– ರಕ್ತ ಹರಿಸಿದ್ದಾರೆ. ಆದರೆ ಈ 70 ವರ್ಷಗಳಲ್ಲಿ ದೇಶ ಪ್ರಗತಿಯೇ ಆಗಿಲ್ಲ ಎನ್ನುತ್ತಿರುವ ಮೋದಿ ಎಲ್ಲರನ್ನೂ ಅವಮಾನಿಸುತ್ತಿದ್ದಾರೆ’ ಎಂದರು.

ರಾಹುಲ್ ಗಾಂಧಿ ಮತ್ತು ಸಿದ್ದರಾ ಮಯ್ಯ ಅವರು ಹೆಜಮಾಡಿಯ ನಾರಾ ಯಣ ಗುರು ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಭಾಷಣದಲ್ಲಿ ಬೆಸೆದುಕೊಂಡ ಬಸವಣ್ಣ– ನಾರಾಯಣಗುರು

ಸಮಾಜ ಸುಧಾರಕರಾದ ನಾರಾಯಣಗುರು ಹಾಗೂ ಬಸವಣ್ಣ ಅವರನ್ನು ತಮ್ಮ ಸುದೀರ್ಘ ಭಾಷಣದಲ್ಲಿ ಬೆಸೆದ ರಾಹುಲ್ ಗಾಂಧಿ, ಕಾಂಗ್ರೆಸ್ ಹೇಗೆ ಆ ಮಹಾನುಭಾವರ ಸಂದೇಶಗಳ ಹಾದಿಯಲ್ಲಿಯೇ ಸಾಗುತ್ತಿದೆ ಎಂದು ಉದಾಹರಣೆ ಸಹಿತ ವಿವರಿಸಿದರು. ಬಿಜೆಪಿ ಅವರ ಚಿಂತನೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಟೀಕಿಸಿದರು.

ಭಾಷಣದ ಆರಂಭದಲ್ಲಿಯೇ ‘ನಾರಾಯಣಗುರುಗಳ ಕರ್ಮಭೂಮಿ ಇದಾಗಿದ್ದು, ಎಲ್ಲರೂ ಒಂದೇ ಎಂಬ ಮಂತ್ರವನ್ನು ಅವರು ಬೋಧಿಸಿದರು. ಎಲ್ಲ ಜಾತಿ– ಧರ್ಮ ಒಂದೇ ಎಂಬ ವಿಚಾರವನ್ನು ಅವರು ಮುಂದಿಟ್ಟರು’ ಎಂದರು. ‘ನುಡಿದಂತೆ ನಡೆ’ ಎಂಬ ಬಸವಣ್ಣನವರ ಸಂದೇಶವನ್ನೂ ಅವರು ನೆನಪಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ನಾರಾಯಣಗುರು ಹಾಗೂ ಬಸವಣ್ಣನವರ ಹೆಸರನ್ನು ಹೇಳುತ್ತಾರೆ. ಆದರೆ ಬಡವ ಮತ್ತು ಶ್ರೀಮಂತರ ಮಧ್ಯೆಯೇ ಅವರು ಭೇದಭಾವ ಮಾಡುತ್ತಾರೆ. ತಾವೇ ನೀಡಿದ ಭರವಸೆ ಈಡೇರಿಸದ ಅವರು ‘ನುಡಿದಂತೆ ನಡೆಯುತ್ತಿಲ್ಲ’ ಎಂದು ಟೀಕಿಸಿದರು.

**

ಜನರ ಮನಸ್ಸಿನಲ್ಲಿ ದ್ವೇಷ ಬಿತ್ತುವ ಹಾಗೂ ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಆದರೆ ಎಲ್ಲರನ್ನೂ ಒಂದೇ ಎಂದು ನೋಡುವ, ಒಗ್ಗೂಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ.

– ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry