ಟೇಬಲ್‌ ಕಾಯ್ದಿರಿಸಲು ಗಾಟ್‌ ಟೇಬಲ್‌ ಆ್ಯಪ್‌

7

ಟೇಬಲ್‌ ಕಾಯ್ದಿರಿಸಲು ಗಾಟ್‌ ಟೇಬಲ್‌ ಆ್ಯಪ್‌

Published:
Updated:
ಟೇಬಲ್‌ ಕಾಯ್ದಿರಿಸಲು ಗಾಟ್‌ ಟೇಬಲ್‌ ಆ್ಯಪ್‌

ಅಚ್ಚುಮೆಚ್ಚಿನ ಹೋಟೆಲ್‌ಗಳಲ್ಲಿ ಟೇಬಲ್‌ ಬುಕ್‌ ಮಾಡಲು ಕಾಯಬೇಕಾಗಿಲ್ಲ. ಗಾಟ್‌ ಟೇಬಲ್‌ ಆ್ಯಪ್‌ (Got Table App) ಡೌನ್‌ಲೋಡ್‌ ಮಾಡಿಕೊಂಡರೆ ಇಷ್ಟವಾದ ಹೋಟೆಲ್‌ನಲ್ಲಿ ಸಮಯಕ್ಕೆ ತಕ್ಕಂತೆ ಟೇಬಲ್‌ ಕಾಯ್ದಿರಿಸಬಹುದು.

ಕೆಲವೊಂದು ಪ್ರಸಿದ್ಧ ಹೋಟೆಲ್‌ಗಳಲ್ಲಿ ವಾರಾಂತ್ಯಗಳಲ್ಲಿ ಟೇಬಲ್‌ ಸಿಗಲು ತಾಸುಗಟ್ಟಲೆ ಕಾಯಬೇಕು. ಇದಕ್ಕೆಲ್ಲ ಉತ್ತರದಂತಿದೆ ಈ

ಆ್ಯಪ್‌. ಟೇಬಲ್‌ ಕಾಯ್ದಿರಿಸಿಕೊಂಡ ತಕ್ಷಣ ಕನ್ಫರ್ಮೆಶನ್‌ ಮೆಸೇಜ್‌ ಮೊಬೈಲ್‌ಗೆ ಬರುತ್ತದೆ.

ಟೇಬಲ್‌ ಯಾವ ಸಯಯಕ್ಕೆ ಬುಕ್‌ ಆಗಿದೆಯೋ ಅದಕ್ಕಿಂತ 15 ನಿಮಿಷದ ಮೊದಲು ಆ್ಯಪ್‌ ನೆನಪು ಮಾಡುತ್ತದೆ. ಹೋಟೆಲ್‌ ಮಾರ್ಗ, ಯಾವ ಮೆನು, ಎಲ್ಲವೂ ಈ ಆ್ಯಪ್‌ನಲ್ಲಿ ನೋಡಬಹುದು. ಈ ಮೂಲಕ ಬೇರೆ ಬೇರೆ ಹೋಟೆಲ್‌ಗಳಲ್ಲಿ ಹೊಸ ರುಚಿಯನ್ನು ಆಸ್ವಾದಿಸಬಹುದು.

ಆ್ಯಪ್‌ಡೌನ್‌ಲೋಡ್‌ಗೆ  www.gottableapp.com. ಈ ಆ್ಯಪ್‌ ರೇಟಿಂಗ್‌ 4+

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry