‘ಪಾಕ್‌ನಲ್ಲಿ ಸಿಖ್ ಯುವಕರಿಗೆ ತರಬೇತಿ’

7

‘ಪಾಕ್‌ನಲ್ಲಿ ಸಿಖ್ ಯುವಕರಿಗೆ ತರಬೇತಿ’

Published:
Updated:
‘ಪಾಕ್‌ನಲ್ಲಿ ಸಿಖ್ ಯುವಕರಿಗೆ ತರಬೇತಿ’

ನವದೆಹಲಿ: ಭಾರತದ ಮೇಲೆ ದಾಳಿ ನಡೆಸುವ ಸಲುವಾಗಿ ಸಿಖ್ ಯುವಕರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

‘ಅಲ್ಲದೆ, ಕೆನಡಾ ಮತ್ತು ಇತರೆ ದೇಶಗಳಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಸದಸ್ಯರಿಗೂ ತಾಯ್ನಾಡಿನ ಕುರಿತು ತಪ್ಪು ಮತ್ತು ದುರುದ್ದೇಶ ಪೂರಿತ ಕಲ್ಪನೆಗಳನ್ನು ತುಂಬಲಾಗುತ್ತಿದೆ’ ಎಂದು ಸಚಿವಾಲಯ ಹೇಳಿದೆ.

‘ಅಂತರ್ಜಾಲ, ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮಾಡಿಕೊಂಡು ಮೂಲಭೂತವಾದ ಬಿತ್ತುತ್ತಿರುವ ಉಗ್ರ ಸಂಘಟನೆಗಳು ಸವಾಲಾಗಿದೆ’ ಎಂದು ಗೃಹ ಕಾರ್ಯದರ್ಶಿ ನೇತೃತ್ವದ ಅಧಿಕಾರಿಗಳ ತಂಡ ಬಿಜೆಪಿ ಮುಖಂಡ ಮುರಳಿ ಮನೋಹರ್ ಜೋಶಿ ಮುಖ್ಯಸ್ಥರಾಗಿರುವ ಸಮಿತಿಗೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry