ಸಿದ್ದಾರ್ಥ್‌, ಶ್ರೀಶಂಕರ್ ಸ್ಪರ್ಧೆ ಅನುಮಾನ

7

ಸಿದ್ದಾರ್ಥ್‌, ಶ್ರೀಶಂಕರ್ ಸ್ಪರ್ಧೆ ಅನುಮಾನ

Published:
Updated:

ನವದೆಹಲಿ: ಅವಧಿಗೆ ಮೊದಲೇ ಹೆಸರು ನೋಂದಾಯಿಸದ ಕಾರಣ ಟ್ರ್ಯಾಕ್‌ ಮತ್ತು ಫೀಲ್ಡ್ ಅಥ್ಲೀಟ್‌ ಎಸ್‌.ಶ್ರೀಶಂಕರ್ ಹಾಗೂ ಸಿದ್ದಾರ್ಥ್ ಯಾದವ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವುದು ಇನ್ನೂ ಖಚಿತಗೊಂಡಿಲ್ಲ.

ಅವಧಿ ಮುಗಿದ ಮೇಲೆ ಅವರ ಹೆಸರನ್ನು ಕಳಿಸಿರುವುದರಿಂದ ಸ್ಪರ್ಧೆಗೆ ಅನುಮತಿ ನೀಡುವಂತೆ ಭಾರತ ಅಥ್ಲೆಟಿಕ್ಸ್ ಫೆಡರೇಷನ್‌ (ಎಎಫ್‌ಐ) ಸಂಘಟಕರಲ್ಲಿ ಮನವಿ ಮಾಡಿಕೊಂಡಿದೆ.

ಹೈ ಜಂಪ್‌ ಸ್ಪರ್ಧಿ ಯಾದವ್‌ ಇತ್ತೀಚೆಗೆ ಎಎಫ್‌ಐ ನಿರ್ಧರಿಸಿದ್ದ ಅರ್ಹತಾ ಮಟ್ಟವನ್ನು ತಲುಪಿದ್ದರು.

ಲಾಂಗ್‌ ಜಂಪ್‌ ಸ್ಪರ್ಧಿ ಶ್ರೀಶಂಕರ್ ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌ನಲ್ಲಿ ಕೆಲವೇ ಮೀಟರ್ಸ್‌ಗಳಲ್ಲಿ ಅರ್ಹತಾ ಮಟ್ಟದಿಂದ ಹಿಂದೆ ಉಳಿದಿದ್ದರು. ಆದರೆ ಇಬ್ಬರ ಹೆಸರನ್ನೂ ಭಾರತ ಅಥ್ಲೆಟಿಕ್ಸ್ ತಂಡದಲ್ಲಿ ಸೇರ್ಪಡೆ ಮಾಡಲಾಗಿತ್ತು.

‘ಇಬ್ಬರು ಅಥ್ಲೀಟ್‌ಗಳು ಅರ್ಹತಾ ಮಟ್ಟ ತಲುಪುವ ಬಗ್ಗೆ ನಿರೀಕ್ಷೆ ಇರಲಿಲ್ಲ. ತಾತ್ಕಾಲಿಕ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ’ ಎಂದು ಎಎಫ್‌ಐ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry