ನೇಮರ್ ಚೇತರಿಕೆ: ರೋಡ್ರಿಗೊ

7

ನೇಮರ್ ಚೇತರಿಕೆ: ರೋಡ್ರಿಗೊ

Published:
Updated:
ನೇಮರ್ ಚೇತರಿಕೆ: ರೋಡ್ರಿಗೊ

ಪ್ಯಾರಿಸ್‌ (ಎಎಫ್‌ಪಿ): ಇತ್ತೀಚೆಗಷ್ಟೇ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬ್ರೆಜಿಲ್‌ ಫುಟ್‌ಬಾಲ್ ಆಟಗಾರ ನೇಮರ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಂಡದ

ವೈದ್ಯರಾದ ರೋಡ್ರಿಗೊ ಲಾಸ್ಮರ್ ಹೇಳಿದ್ದಾರೆ.

‘ಮಾರ್ಚ್‌ 3ರಂದು ನೇಮರ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಕೆಲವು ವಾರಗಳಲ್ಲಿ ಅವರು ಗುಣಮುಖರಾಗಲಿದ್ದಾರೆ. ರಷ್ಯಾದಲ್ಲಿ ನಡೆಯುವ ವಿಶ್ವಕಪ್‌ ವೇಳೆಗೆ ಫಿಟ್ ಆಗಲಿದ್ದಾರೆ’ ಎಂದು ರೋಡ್ರಿಗೊ ಮಾಹಿತಿ ನೀಡಿದ್ದಾರೆ.

‘ಏಪ್ರಿಲ್ ತಿಂಗಳಿನಲ್ಲಿ ಗಾಯ ವಾಸಿಯಾಗುವ ನಿರೀಕ್ಷೆ ಇದೆ. ಆ ಬಳಿಕ ಅಭ್ಯಾಸ ಆರಂಭಿಸಬಹುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry