ಬಿಜೆಪಿಗೆ ನಾನೂ ಹೋಗಲ್ಲ, ಮಗನೂ ಸೇರಲ್ಲ

7

ಬಿಜೆಪಿಗೆ ನಾನೂ ಹೋಗಲ್ಲ, ಮಗನೂ ಸೇರಲ್ಲ

Published:
Updated:
ಬಿಜೆಪಿಗೆ ನಾನೂ ಹೋಗಲ್ಲ, ಮಗನೂ ಸೇರಲ್ಲ

ದಾವಣಗೆರೆ: ‘ನಾನು ಬಿಜೆಪಿ ಸೇರಲ್ಲ. ಬಿಜೆಪಿಯಲ್ಲಿ ಯಾರಾದ್ರು ಜೈಲಿಗೆ ಹೋಗದೆ ಇದ್ದವರು ಇದ್ದರೆ ಕಾಂಗ್ರೆಸ್‌ಗೆ ಬರಲಿ’ ಎಂದು ಶಾಸಕ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆದ ಶಾಮನೂರು ಶಿವಶಂಕರಪ್ಪ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಬಿಜೆಪಿ ಸೇರ್ಪಡೆ ಕುರಿತ ವದಂತಿ ಬಗ್ಗೆ ನಗರದ ತಮ್ಮ ಗೃಹ ಕಚೇರಿಯಲ್ಲಿ ಬುಧವಾರ ಸುದ್ದಿಗಾರರಿಗೆ ಅವರು ಸ್ಪಷ್ಟನೆ ನೀಡಿದರು. ‘ನಾನು ಅಥವಾ ನನ್ನ ಪುತ್ರ (ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ) ಬಿಜೆಪಿ ಸೇರುವುದು ಸುಳ್ಳು. ಯಾರು ಏನಾದರೂ ಹೇಳಿಕೊಳ್ಳಲಿ’ ಎಂದು ಅವರು ಹೇಳಿದರು.

‘ಪಕ್ಷಕ್ಕೆ ಸೇರಿಕೊಳ್ಳಿ ಎಂದು ಯಾರೂ ನನಗೆ ಒತ್ತಡ ಹಾಕಿಲ್ಲ. ನನ್ನಂತಹ ಅಜ್ಜನ ಹತ್ತಿರ ಯಾರು ಬರುವುದೂ ಇಲ್ಲ’ ಎಂದು ಚಟಾಕಿ ಹಾರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry