ಸಂಪ್ರದಾಯ ಮೀರಿ ಅಂಗಣಕ್ಕಿಳಿದ ಯುವತಿಯರು

6

ಸಂಪ್ರದಾಯ ಮೀರಿ ಅಂಗಣಕ್ಕಿಳಿದ ಯುವತಿಯರು

Published:
Updated:
ಸಂಪ್ರದಾಯ ಮೀರಿ ಅಂಗಣಕ್ಕಿಳಿದ ಯುವತಿಯರು

ಮೊಗಡಿಶು (ಎಎಫ್‌ಪಿ): ಧಾರ್ಮಿಕ ಕಟ್ಟಳೆಗಳಿಗೆ ಸೆಡ್ಡು ಹೊಡೆದ ಸೊಮಾಲಿ ಯಾದ ಅರವತ್ತು ಯುವತಿಯರ ಕಥೆಯಿದು.

ಆಲ್ ಖೈದಾ ಭಯೋತ್ಪಾದಕ ಸಂಘಟನೆಯ ಬೆಂಬಲಿತ ಇಸ್ಲಾಂ ಪ್ರತಿಗಾಮಿ ಗುಂಪುಗಳು ವಿಧಿಸಿರುವ ಕಟ್ಟಳೆಗಳ ವಿರುದ್ಧ ಈ ಯುವತಿಯರು ಫುಟ್‌ಬಾಲ್ ಅಂಗಳಕ್ಕೆ ಇಳಿದಿದ್ದಾರೆ. ಪ್ರತಿದಿನ ಬೆಳಿಗ್ಗೆ  ಮೊಗಡಿಶು ಮೈದಾನ ದಲ್ಲಿ ಹಿಜಾಬ್‌ ತೆಗೆದಿಟ್ಟು ಶಾರ್ಟ್ಸ್‌ ಧರಿಸಿ  ವ್ಯಾಯಾಮ, ಆಟದಲ್ಲಿ ನಿರತರಾಗುತ್ತಾರೆ. ಯುವ ಆಟಗಾರನೊಬ್ಬ ಅವರಿಗೆ ತರಬೇತಿ ನೀಡುತ್ತಿದ್ದಾನೆ.

‘ಶಾರ್ಟ್ಸ್‌, ಟಿ–ಶರ್ಟ್‌ ತೊಟ್ಟು ಅಂಗಳಕ್ಕೆ ಇಳಿಯುವುದು ನಮಗೆ ಸುಲ ಭವಲ್ಲ. ಈ ಮೊದಲು ನಾವು ಹಿಜಾಬ್‌ ಧರಿಸದೆ ಹೊರಗೆ ಹೋದವರಲ್ಲ.

ಭಯದ ವಾತಾವರಣದಲ್ಲಿಯೇ ಬದುಕುತ್ತಿದ್ದೇವೆ. ಫುಟ್‌ಬಾಲ್‌ ಕ್ರೀಡೆಯು ನಮ್ಮಲ್ಲಿ ಆತ್ಮವಿಶ್ವಾಸ ಮೂಡಿಸಿದೆ’  ಎಂದು ಯುವ ಆಟಗಾರ್ತಿ ಹಿಬಾಗ್‌ ಅಬುಖಾದಿರ್ ಹೇಳುತ್ತಾರೆ. ಸೊಮಾಲಿಯಾದ ಸಂಪ್ರದಾಯದಲ್ಲಿ ಮಹಿಳೆಯರು ಫುಟ್‌ಬಾಲ್ ಆಡುವುದಕ್ಕೆ ಅನುಮತಿ ಇಲ್ಲ. ಫುಟ್‌ಬಾಲ್ ಸೇರಿದಂತೆ ಇತರೆ ಮನರಂಜನಾ ಚಟುವಟಿಕೆಗಳಲ್ಲಿ ಮಹಿಳೆಯರು ಭಾಗಿಯಾಗುವುದು ಅಪರಾಧ ಎಂಬ ಕಟ್ಟಳೆಯನ್ನು ಸಂಪ್ರದಾಯವಾದಿಗಳು ಹೇರಿದ್ದಾರೆ.

ಆದರೆ ಈ ಯುವತಿಯರು ಸಂಪ್ರದಾಯವನ್ನು ತಿರಸ್ಕರಿಸಿದ್ದಾರೆ. ಹೊಸ ಹೆಜ್ಜೆ ಇಟ್ಟಿದ್ದಾರೆ.ಭದ್ರತಾ ಚೆಕ್‌ ಪಾಯಿಂಟ್‌ನಿಂದ 200 ಮೀಟರ್ ದೂರದಲ್ಲಿರುವ ಮೈದಾನದಲ್ಲಿ ಭವ್ಯ ಭವಿಷ್ಯದ ಕನಸು ಕಾಣುತ್ತಿದ್ದಾರೆ.

60 ಆಟಗಾರ್ತಿಯರು ‘ಗೋಲ್ಡನ್‌ ಗರ್ಲ್ಸ್‌ ಸೆಂಟರ್‌’ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದು ಮೊಗಡಿಶುವಿನ ಮೊದಲ ಮಹಿಳೆಯರ ಪುಟ್‌ಬಾಲ್ ಕ್ಲಬ್ ಆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry