ನಟಿಯನ್ನು ಡೇಟಿಂಗ್‌ಗೆ ಕರೆದ ಅಪರಿಚಿತ

7

ನಟಿಯನ್ನು ಡೇಟಿಂಗ್‌ಗೆ ಕರೆದ ಅಪರಿಚಿತ

Published:
Updated:
ನಟಿಯನ್ನು ಡೇಟಿಂಗ್‌ಗೆ ಕರೆದ ಅಪರಿಚಿತ

ಬೆಂಗಳೂರು: ನಟಿ ಮೇಘನಾ ಗಾಂವ್ಕರ್‌ ಅವರಿಗೆ ಇ–ಮೇಲ್‌ ಕಳುಹಿಸಿರುವ ಅಪರಿಚಿತ ವ್ಯಕ್ತಿಯೊಬ್ಬ, ಡೇಟಿಂಗ್‌ಗೆ ಕರೆದಿದ್ದಾನೆ.

’ಟಿಂಡರ್‌ ಆ್ಯಪ್‌ನಲ್ಲಿ ನಿನ್ನನ್ನು ಭೇಟಿಯಾಗಿದ್ದೆ. ನಮ್ಮ ಏರಿಯಾದಲ್ಲಿ ಒಂದು ದಿನ ನನ್ನ ಜತೆ ಡೇಟಿಂಗ್‌ಗೆ ಬಂದರೆ ಚೆನ್ನಾಗಿರುತ್ತದೆ. ಬರುತ್ತೀಯಾ?’ ಎಂದು ಮೇಲ್‌ನಲ್ಲಿ ಬರೆದಿರುವುದಾಗಿ ಗೊತ್ತಾಗಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಮೇಘನಾ, ‘ನಾನು ಟಿಂಡರ್‌ ಆ್ಯಪ್‌ನಲ್ಲಿಲ್ಲ. ಮುಂದೆಯೂ ಇರುವುದಿಲ್ಲ. ಅದಕ್ಕೆ ಚಾನ್ಸೇ ಇಲ್ಲ’ ಎಂದಿದ್ದಾರೆ.

‘ಯಾರೋ ಒಬ್ಬ ನನಗೆ ಇ–ಮೇಲ್ ಮಾಡಿ ಆ್ಯಪ್‌ನಲ್ಲಿ ಪರಿಚಯವಾಗಿದ್ದೆ ಎಂದು ಹೇಳಿಕೊಂಡಿದ್ದಾನೆ. ಆದರೆ, ಅದು ನಾನಲ್ಲ. ನೀವೆಲ್ಲರೂ ಇದನ್ನು ತಿಳಿದುಕೊಳ್ಳಿ’ ಎಂದು ಬರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry