ಪರಿಶಿಷ್ಟ ಜಾತಿಗೆ ಪರಿವಾರ, ತಳವಾರ

7

ಪರಿಶಿಷ್ಟ ಜಾತಿಗೆ ಪರಿವಾರ, ತಳವಾರ

Published:
Updated:

ನವದೆಹಲಿ: ಪರಿವಾರ ಮತ್ತು ತಳವಾರ ಸಮುದಾಯಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಕೇಂದ್ರ ಸಂಪುಟ ಬುಧವಾರ ಆದೇಶ ಹೊರಡಿಸಿದೆ.

ಈ ಎರಡೂ ಸಮುದಾಯಗಳು ನಾಯಕ ಸಮುದಾಯಕ್ಕೆ ಸಮಾನ

ವಾಗಿವೆ. ಹಾಗಾಗಿ ಈ ಸಮುದಾಯಗಳನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ಮನವಿ

ಸಲ್ಲಿಸಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಮನವಿಗೆ ಮನ್ನಣೆ ನೀಡಲಾಗಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಷನ್‌ ಯೋಜನೆಗೂ ಸಂಪುಟ ಒಪ್ಪಿಗೆ ನೀಡಿದೆ. ಆದರೆ ಈ ಯೋಜನೆಗೆ ಎಷ್ಟು ಹಣ ನೀಡಲಾಗಿದೆ ಎಂಬುದನ್ನು ಸರ್ಕಾರ ತಿಳಿಸಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry