ನಡಹಳ್ಳಿ ತಳ್ಳಾಡಿದ ಹಳೇ ವಿಡಿಯೊ ವೈರಲ್

7

ನಡಹಳ್ಳಿ ತಳ್ಳಾಡಿದ ಹಳೇ ವಿಡಿಯೊ ವೈರಲ್

Published:
Updated:

ಬೆಂಗಳೂರು: ಶಾಸಕ ಎ.ಎಸ್. ಪಾಟೀಲನಡಹಳ್ಳಿ ಬುಧವಾರ ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ,ಅವರನ್ನು ಕೆಲವರು ಎಳೆದಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಾರ್ಯಕರ್ತರ ನಡುವೆ ನಡೆದುಕೊಂಡು ಹೋಗುತ್ತಿರುವಾಗ ತಳ್ಳಾಡಿದ್ದರು. ಆ ವಿಡಿಯೊ 2017ರ ಜುಲೈ 26ರಂದು ಯೂಟ್ಯೂಬ್‌ನಲ್ಲೂ ಅಪ್‌

ಲೋಡ್ ಆಗಿದೆ. ಬುಧವಾರ ಈ ವಿಡಿಯೊ ತುಣುಕು ವಾಟ್ಸ್ ಆ್ಯಪ್‌ನಲ್ಲಿ ಹರಿದಾಡುತ್ತಿದ್ದು, ‘ಶಾಸಕ ನಡಹಳ್ಳಿಗೆ ಸಾರ್ವಜನಿಕರು ಮಾಡುತ್ತಿರುವ ಸನ್ಮಾನ ನೋಡಿ’ ಎಂಬ ಕ್ಯಾಪ್ಷನ್ ಬರೆಯಲಾಗಿದೆ.

ಈ ಕುರಿತು ಫೇಸ್‌ಬುಕ್‌ ಲೈವ್ ಚಾಟ್‌ನಲ್ಲೇ ಪ್ರತಿಕ್ರಿಯಿಸಿರುವ ನಡಹಳ್ಳಿ‘ನಾನು ಬಿಜೆಪಿ ಸೇರಿದ ಬಳಿಕ ಮುದ್ದೇಬಿಹಾಳ ಮತ್ತು ದೇವರ ಹಿಪ್ಪರಗಿ

ಕ್ಷೇತ್ರದಲ್ಲಿ ಜನ ಸಂಭ್ರಮಾಚರಣೆ ಮಾಡಿದ್ದಾರೆ. ಆದರೆ, ಕೆಲವು ರಾಜಕೀಯ ವಿರೋಧಿಗಳು ಹಳೇ ವಿಡಿಯೊ ಹರಿಬಿಟ್ಟು ವಿಕೃತ ಪ್ರದರ್ಶಿಸಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ’ ಎಂದಿದ್ದಾರೆ.

‘ಸದ್ಯ ನಾನು ಬೆಂಗಳೂರಿನಲ್ಲೇ ಇದ್ದು, ರಾಜ್ಯಸಭೆ ಚುನಾವಣೆ ಮುಗಿದ ಬಳಿಕ ಕ್ಷೇತ್ರಕ್ಕೆ ಹೋಗುತ್ತೇನೆ. ಅಭಿಮಾನಿಗಳು ಆತಂಕಗೊಳ್ಳು

ವುದು ಬೇಡ’ ಎಂದೂ ಅವರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry