ಜಾತಿ ಪ್ರಮಾಣಪತ್ರ: ತಾಯಿ ಹೆಸರು ಕಡ್ಡಾಯ

7

ಜಾತಿ ಪ್ರಮಾಣಪತ್ರ: ತಾಯಿ ಹೆಸರು ಕಡ್ಡಾಯ

Published:
Updated:

ಬೆಂಗಳೂರು: ‘ಜಾತಿ ಪ್ರಮಾಣಪತ್ರದಲ್ಲಿ ತಾಯಿಯ ಹೆಸರನ್ನು ಕಡ್ಡಾಯವಾಗಿ ಮುದ್ರಿಸಲು ಕಾಯ್ದೆಗೆ ತಿದ್ದುಪಡಿ ತರುವಂತೆ ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿಬಾಯಿ ಹೇಳಿದರು.

ಮಹಿಳಾ ಆಯೋಗ ಹಾಗೂ ಮಲ್ಲೇಶ್ವರ ಲೇಡೀಸ್ ಅಸೋಸಿಯೇಷನ್ ವತಿಯಿಂದ ಬುಧವಾರ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

ಜಾತಿ ಪ್ರಮಾಣಪತ್ರದಲ್ಲಿ ತಂದೆಯ ಹೆಸರನ್ನು ಮಾತ್ರ ನಮೂದಿಸಲಾಗುತ್ತಿದೆ. ಈ ತಾರತಮ್ಯ ಧೋರಣೆ ಬದಲಾಗಬೇಕು. ಎಲ್ಲ ಪ್ರಮಾಣಪತ್ರಗಳಲ್ಲೂ ತಾಯಿಯ ಹೆಸರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಅನೇಕ ವರ್ಷಗಳಿಂದ ಮಹಿಳೆಯರನ್ನು ಎರಡನೇ ಪ್ರಜೆಯಾಗಿಯೇ ಪರಿಗಣಿಸಲಾಗುತ್ತಿದೆ. ಶೋಷಣೆಯ ಇನ್ನೊಂದು ಮುಖವಾಗಿರುವ ಈ ಧೋರಣೆ ಬದಲಾಗಬೇಕು ಎಂದರು.

ಆಯೋಗದಲ್ಲಿ ದಾಖಲಾಗುವ ಶೇ 80 ರಷ್ಟು ಪ್ರಕರಣಗಳಿಗೆ ಮೊಬೈಲ್‌ಗಳೇ ಕಾರಣವಾಗಿವೆ. ಹೀಗಾಗಿ, ಮೊಬೈಲ್‌ ಬಳಕೆ ಬಗ್ಗೆ ಯುವತಿಯರು ಎಚ್ಚರವಹಿಸಬೇಕು. ನಗರದಲ್ಲಿ ದಾಖಲಾದ ಶೇ 80ರಷ್ಟು ಪ್ರಕರಣಗಳು ಸಾಫ್ಟ್‌ವೇರ್ ಎಂಜಿನಿಯರ್‌ಗಳದ್ದಾಗಿವೆ. ಸಣ್ಣಸಣ್ಣ ವಿಚಾರಗಳಿಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸುತ್ತಿದ್ದಾರೆ. ವಿದ್ಯಾವಂತರಲ್ಲೇ ನೈತಿಕತೆ ಕುಸಿಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಮಾಹಿತಿ ನೀಡಿದರು.

ಅಸೋಸಿಯೇಷನ್‌ನ ಉಪಾಧ್ಯಕ್ಷೆ ಶೈಲಜಾ ಶ್ರೀನಿವಾಸ್, ‘ಪ್ರಪಂಚದಲ್ಲಿ ಅತ್ಯಂತ ಸುಂದರವಾದವುಗಳನ್ನು ಪಟ್ಟಿ ಮಾಡುವ ಅವಕಾಶ ಸಿಕ್ಕಾಗ, ಅದರಲ್ಲಿ ನಿಮ್ಮ ಹೆಸರನ್ನು ಬರೆಯಿರಿ. ಮೊದಲು ನಿಮ್ಮನ್ನು ನೀವು ಪ್ರೀತಿಸಿ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry