5 ವರ್ಷಗಳಲ್ಲಿ ರಸ್ತೆ ಅಭಿವೃದ್ಧಿಗೆ ₹75 ಕೋಟಿ

7
ಗ್ರಾಮವಿಕಾಸ ಯೋಜನೆಯಡಿ ₹80 ಲಕ್ಷ ವೆಚ್ಚದ ವಿವಿಧ ಕಾಮಗಾರಿಗೆ ಭೂಮಿ ಪೂಜೆ

5 ವರ್ಷಗಳಲ್ಲಿ ರಸ್ತೆ ಅಭಿವೃದ್ಧಿಗೆ ₹75 ಕೋಟಿ

Published:
Updated:

ದೇವನಹಳ್ಳಿ: ಐದು ವರ್ಷಗಳಲ್ಲಿ ವಿವಿಧ ಇಲಾಖೆಗಳ ವತಿಯಿಂದ ಅಂದಾಜು ₹75 ಕೋಟಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ ಎಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.

ವಿಶ್ವನಾಥಪುರ ಗ್ರಾಮದಲ್ಲಿ ಗ್ರಾಮ ವಿಕಾಸ ಯೋಜನೆಯಡಿ ₹80 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮ, ಸಮಾಜ ಕಲ್ಯಾಣ ಇಲಾಖೆ, ಸರ್ಕಾರದ ವಿಶೇಷ ಅನುದಾನ, ಶಾಸಕರ ವಿವೇಚನಾ ಕೋಟಾದ ಅನುದಾನದಲ್ಲಿ ಕ್ಷೇತ್ರ

ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ರಸ್ತೆ, ಚರಂಡಿ ನಿರ್ಮಾಣವಾಗಿದೆ. ಬೂದಿಗೆರೆ, ಸಿಂಗ್ರಹಳ್ಳಿ, ವಿಶ್ವನಾಥಪುರ, ಗ್ರಾಮವನ್ನು ಗ್ರಾಮ ವಿಕಾಸ ಯೋಜನೆಯಲ್ಲಿ ಗುರುತಿಸಲಾಗಿದೆ. ನಾಡ ಪ್ರಭು ಕೆಂಪೇಗೌಡರ ವಂಶಸ್ಥರ ಕರ್ಮಭೂಮಿ ನಾಡ ಪ್ರಭು ರಣಭೈರೇಗೌಡರು ನೆಲೆಸಿದ್ದ ಆವತಿ ಗ್ರಾಮವನ್ನು ಒಂದು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

ಗ್ರಾಮ ವಿಕಾಸ ಯೋಜನೆಯ ಪರಿಕಲ್ಪನೆಯಂತೆ ಸಮುದಾಯ ಭವನ, ವಾಚನಾಲಯ, ದೇವಾಲಯ ಅಭಿವೃದ್ಧಿ, ರಸ್ತೆ, ಚರಂಡಿ ದುರಸ್ತಿ, ಕ್ರೀಡಾ ಚಟು

ವಟಿಕೆಗೆ ಒತ್ತು ನೀಡುವುದು, ಕುಡಿಯುವ ನೀರು, ಪ್ರತಿಯೊಂದು ಮೂಲ ಸೌಲಭ್ಯ ಒದಗಿಸಲಾಗಿದೆ. ‘ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ’ಯಡಿ 104 ಗ್ರಾಮಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಜಿಲ್ಲಾಡಳಿತ ಸಂಕೀರ್ಣ ಉದ್ಘಾಟನೆಗೊಂಡು ಜೂನ್‌ 15 ಕ್ಕೆ ‌ನಗರದಲ್ಲಿರುವ ಜಿಲ್ಲಾಧಿಕಾರಿ ಸಿಬ್ಬಂದಿ

ನೂತನ ಕಚೇರಿಗೆ ಸ್ಥಳಾಂತರ ಆಗಲಿದ್ದಾರೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ಬಿಎಸ್‌ಪಿ ಜಿಲ್ಲಾ ಘಟಕ ಉಪಾಧ್ಯಕ್ಷ ನರಸಿಂಹರಾಜು, ಜೆಡಿಎಸ್ ಮಹಿಳಾ ಘಟಕ ತಾಲ್ಲೂಕು ಅಧ್ಯಕ್ಷೆ ಮೀನಾಕ್ಷಿ ಮುನಿಕೃಷ್ಣ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಮೂರ್ತಿ, ಉಪಾಧ್ಯಕ್ಷೆ ರಮಾದೇವಿ, ಜೆಡಿಎಸ್ ಹಿಂದುಳಿದ ವರ್ಗ ಘಟಕ ಅಧ್ಯಕ್ಷ ಲಕ್ಷ್ಮಣ್, ಕುಂದಾಣ ಹೋಬಳಿ ಜೆಡಿಎಸ್ ಘಟಕ ಆದ್ಯಕ್ಷ ಚಂದ್ರೇಗೌಡ, ಮುಖಂಡರಾದ ಸುಬ್ಬೇಗೌಡ, ಗುರಪ್ಪ, ಮನೋಜ್ ಗೌಡ, ಶಿವರಾಮಯ್ಯ, ಶ್ರೀನಿವಾಸ್, ಕೆ.ರಮೇಶ್, ಚಿಕ್ಕನಾರಾಯಣ ಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ ಇದ್ದರು.

**

ಎಪಿಎಂಸಿ ನಿರ್ದೇಶಕ ಕೆ.ವಿ.ಮಂಜುನಾಥ್ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯೆ ಶೈಲಜಾ ಜಗದೀಶ್ ಮಾತನಾಡಿ, ಸರ್ಕಾರ ಎಲ್ಲಾ ಭಾಗ್ಯಗಳ ಯೋಜನೆ ಬದಿಗೊತ್ತಿ ಗ್ರಾಮ ವಿಕಾಸ ಯೋಜನೆಗೆ ಮೊದಲ ಆದ್ಯತೆ ನೀಡಬೇಕು. ಭಾಗ್ಯಗಳಿಂದ ಆದರ್ಶ ಗ್ರಾಮಗಳಾಗಲು ಸಾಧ್ಯವಿಲ್ಲ. ಯಾವುದೇ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯರ ಸಹಕಾರ ಅಗತ್ಯ ಎಂದರು.

‘ರಸ್ತೆ ಮೇಲೆ ದನಕರುಗಳನ್ನು ಕಟ್ಟುವುದು, ಬಟ್ಟೆ ಶುಚಿಗೊಳಿಸುವುದು ಮಾಡಬಾರದು. ನಮ್ಮ ಮನೆಯ ಸುತ್ತ ಮುತ್ತಲಿನ ಪರಿಸರವನ್ನು ನಾವೇ ರಕ್ಷಣೆ ಮಾಡಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry