ಹಳ್ಳಿಯತ್ತ ಪ್ಯಾಟೆ ಹುಡುಗಿಯರು

7

ಹಳ್ಳಿಯತ್ತ ಪ್ಯಾಟೆ ಹುಡುಗಿಯರು

Published:
Updated:
ಹಳ್ಳಿಯತ್ತ ಪ್ಯಾಟೆ ಹುಡುಗಿಯರು

ಸ್ಟಾರ್‌ ಸುವರ್ಣದಲ್ಲಿ ಮಾರ್ಚ್‌ 26ರಿಂದ ಪ್ರತಿ ರಾತ್ರಿ 9ಗಂಟೆಗೆ ‘ಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫು ಸೀಸನ್ 4’ ರಿಯಾಲಿಟಿ ಕಾರ್ಯಕ್ರಮ ಪ್ರಸಾರವಾಗಲಿದೆ.

ಅದೃಷ್ಟಶಾಲಿ 12 ಹುಡುಗಿಯರು ಹಳ್ಳಿ ಹಾಡು ಹಾಡಲಿದ್ದಾರೆ. ನಗರದಲ್ಲಿ ಹುಟ್ಟಿ ಬೆಳೆದ, ಹಳ್ಳಿ ಜೀವನ ಏನೆಂದು ತಿಳಿಯದ ಈ ಹುಡುಗಿಯರು ತಮ್ಮ ಮನೆ ಮತ್ತು ಸಂಬಂಧಿಕರಿಂದ ದೂರವಾಗಿ 3 ತಿಂಗಳ ಕಾಲ ಅಜ್ಞಾತ ಹಳ್ಳಿಯಲ್ಲಿ ವಾಸಿಸಲಿದ್ದಾರೆ. ಹಳ್ಳಿ ಸೊಗಡಿನ ಕೆಲಸ ಮಾಡುವುದರ ಜೊತೆಗೆ ಟಾಸ್ಕ್‌ಗಳ ಮೂಲಕ ಎಲಿಮಿನೇಷನ್ ಪ್ರಕ್ರಿಯೆಯಿಂದ ಬಚಾವಾಗಬಹುದು.

ಅಕುಲ್ ಬಾಲಾಜಿ ಈ ಸೀಸನ್‌ನಲ್ಲೂ ನಿರೂಪಕರಾಗಿದ್ದಾರೆ. ಉಡುಪಿಯ ಅಭಿಘ್ನಾ, ದೆಹಲಿಯ ಅರ್ಪಿತಾ, ಬೆಂಗಳೂರಿನ ಭಾವನಾ, ಆಸಿಯಾ ಬೇಗಂ, ಮೆಬೀನಾ, ಪ್ರತೀಕ್ಷಾ, ಶಮಿತಾ, ಶಹನ್ ಪೊನ್ನಮ್ಮ, ಶರಣ್ಯ, ಭವಿನ್ ಮತ್ತು ಸ್ಫೂರ್ತಿ ಗೌಡ ಪ್ಯಾಟೆಯಿಂದ ಹಳ್ಳಿಗೆ ಹೊರಟಿರುವ ಸ್ಪರ್ಧಿಗಳು. ಅವರ ಜೊತೆ ‘ಅಧ್ಯಕ್ಷ’ ಮತ್ತು ‘ಆಟಗಾರ’ ಚಿತ್ರದಲ್ಲಿ ನಟಿಸಿರುವ ಪ್ರಿಯಾಂಕಾ ಕೂಡ ಸ್ಪರ್ಧಿಯಾಗಿದ್ದಾರೆ.

ಸ್ಪರ್ಧಿಗಳ ಪರಿಚಯದ ಜೊತೆಗೆ ನಟ ಶಿವರಾಜ್‌ಕುಮಾರ್, ಹರಿಪ್ರಿಯಾ, ರಚಿತಾ ರಾಮ್, ಧನಂಜಯ್, ಮಾನ್ವಿತಾ ಹರೀಶ್‌ ಸೇರಿದಂತೆ ಚಂದನವನದ ತಾರೆಯರು ಅದ್ದೂರಿ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry