ವಡಗೂರು ಗೇಟ್ ಬಳಿ ಕಾರು ಅಪಘಾತಕ್ಕೆ ಮೂವರು ಬಲಿ

7

ವಡಗೂರು ಗೇಟ್ ಬಳಿ ಕಾರು ಅಪಘಾತಕ್ಕೆ ಮೂವರು ಬಲಿ

Published:
Updated:
ವಡಗೂರು ಗೇಟ್ ಬಳಿ ಕಾರು ಅಪಘಾತಕ್ಕೆ ಮೂವರು ಬಲಿ

ಕೋಲಾರ: ತಾಲ್ಲೂಕಿನ ವಡಗೂರು ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುರುವಾರ ಕಾರು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಮೂರು ಮಂದಿ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಕೆಂಬೋಡಿ ಸರ್ಕಾರಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ನಾರಾಯಣಸ್ವಾಮಿ (13), ಏಳನೇ ತರಗತಿ ವಿದ್ಯಾರ್ಥಿ ಸುದರ್ಶನ್‌ (12) ಮತ್ತು ವಡಗೂರು ಗ್ರಾಮದ ವೆಂಕಟಪ್ಪ (25) ಮೃತಪಟ್ಟವರು.

ರಾಮಸಂದ್ರ ಗ್ರಾಮದ ನಾರಾಯಣಸ್ವಾಮಿ ಮತ್ತು ಸುದರ್ಶನ್‌ ಶಾಲೆ ಮುಗಿದ ನಂತರ ಸಂಜೆ ವಡಗೂರು ಗೇಟ್‌ನಲ್ಲಿ ಊರಿಗೆ ಹಿಂದಿರುಗಲು ಬಸ್‌ಗೆ ಕಾಯುತ್ತಾ ನಿಂತಿದ್ದರು. ವೆಂಕಟಪ್ಪ ಬೈಕ್‌ನಲ್ಲಿ ಊರಿಗೆ ಹೋಗುತ್ತಿದ್ದರು. ಆಗ ಅದೇ ಮಾರ್ಗವಾಗಿ ಬಂದ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಹರಿದು, ವೆಂಕಟಪ್ಪರ ಬೈಕ್‌ಗೆ ಗುದ್ದಿದೆ. ತೀವ್ರವಾಗಿ ಗಾಯಗೊಂಡ ವಿದ್ಯಾರ್ಥಿಗಳು ಮತ್ತು ವೆಂಕಟಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ವಿಜಯಕುಮಾರ್‌ ಎಂಬ ವಿದ್ಯಾರ್ಥಿ ಹಾಗೂ ವಡಗೂರಿನ ಸುಬ್ರಮಣಿ ಎಂಬುವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry