ಕಿಟಕಿಗಳಲ್ಲಿ ಗಿಡ ಬೆಳೆಯಿರಿ

7

ಕಿಟಕಿಗಳಲ್ಲಿ ಗಿಡ ಬೆಳೆಯಿರಿ

Published:
Updated:
ಕಿಟಕಿಗಳಲ್ಲಿ ಗಿಡ ಬೆಳೆಯಿರಿ

ಮನೆಯ ಕಿಟಕಿ, ಬಾಲ್ಕನಿಗಳಲ್ಲಿ ಗಿಡಗಳನ್ನು ಬೆಳೆಯಬಹುದು. ಗಿಡ ಬೆಳೆಯಬೇಕೆಂಬ ಆಸೆ ಇದ್ದರೂ, ಕುಂಡಗಳನ್ನು ಇಡಲು ಮನೆಯಲ್ಲಿ ಸ್ಥಳವಿಲ್ಲ ಎನ್ನುವವರಿಗೆ ಇದು ಉತ್ತಮ ಅವಕಾಶ.

* ಕಿಟಕಿಗಳಿಗೆ ಇರುವ ಕಂಬಿಗಳಿಗೆ ಮನಿ ಪ್ಲಾಂಟ್‌ ಗಾರ್ಲಿಕ್‌ ಕ್ರೀಪರ್‌, ಅಲ್ಮಂಡಾ ಕ್ರೀಪರ್‌ ಸೇರಿದಂತೆ ಅಮೃತ ಬಳ್ಳಿಯಂತಹ ಬಳ್ಳಿಗಳನ್ನು ಹಬ್ಬಿಸಬಹುದು. ಕಿಟಕಿಯ ಮೇಲೆ ಒಂದು ಕಂಬಿಯನ್ನು ಕಟ್ಟಿ ಅಲ್ಲಿ ಇವುಗಳನ್ನು ಜೋತುಬೀಳುವಂತೆ ಇಡಬೇಕು. ಅವುಗಳು ಬೆಳೆದ ನಂತರ ಕರ್ಟನ್‌ ರೀತಿಯಲ್ಲಿ ಕೆಲಸಕ್ಕೆ ಬರುತ್ತವೆ. ಜೊತೆಗೆ ಮನೆಯ ಅಂದವೂ ಹೆಚ್ಚುತ್ತದೆ.

* ನೆರಳಿನಲ್ಲಿ ಬೆಳೆದು ಹೂವು ಬಿಡುವ ಆಂತೋರಿಯಮ್, ಸ್ಪಾತಿಫಿಲಂ, ಸಿಂಗೋನಿಯಂಮ್ಸ್‌ ಪೆಟ್ರೋಮಿಯಗಳನ್ನು ಮನೆಯ ಒಳಗೆ ಕಿಟಕಿಯ ಬಳಿ ನೆಡಬಹುದು. ಆದರೆ ಇವುಗಳಿಗೆ ನೀರು ಮತ್ತು ಗೊಬ್ಬರ ಹಾಕಲು ಮತ್ತು ಕೀಟಗಳಿಂದ ರಕ್ಷಿಸಲು ಸ್ವಲ್ಪ ಸಮಯ ಕೊಡಬೇಕಾಗುತ್ತದೆ.

* ಕಿಟಕಿಗಳ ಬಳಿ ಚಿಕ್ಕ ಕುಂಡಗಳಲ್ಲಿ ಬೊನ್ಸಾಯ್ ಗಿಡಗಳನ್ನು ನೆಡಬಹುದು. ಇವುಗಳ ನಿರ್ವಹಣೆಗೆ ಮುತುವರ್ಜಿ ವಹಿಸುವುದು ಅಗತ್ಯ. ಕಟಾವು, ಗೊಬ್ಬರಗಳ ಬಗ್ಗೆ ಸರಿಯಾಗಿ ತಿಳಿಕೊಂಡು ಬೊನ್ಸಾಯಿ ಬೆಳೆಯುವ ಸಾಹಸ ಮಾಡಿ.

* ಬಿದಿರು ಅಥವಾ ಪೈಪ್‌ಗಳಲ್ಲಿಯೂ ಗಿಡಗಳನ್ನು ಬೆಳೆಸಬಹುದು. ಇವುಗಳನ್ನು ಕಿಟಕಿಯ ಕಂಬಿಗೆ ಸಿಕ್ಕಿಸಿಬಹುದು.

* ಗಿಡಗಳಿಗೆ ನೀರು, ಗೊಬ್ಬರ ಹಾಕಿ ನೋಡಿಕೊಳ್ಳಲು ಸಮಯವಿಲ್ಲದವರಿಗಾಗಿ ‘ಮೇಂಟೆನೆನ್ಸ್ ಫ್ರೀ’ ಗಾರ್ಡನ್‌ ಇದೆ. ಇಲ್ಲಿ ಮರುಭೂಮಿಗಳಲ್ಲಿ ಬೆಳೆಯುವ ಸೆಕ್ಯುಲೆನ್ಸ್‌ ಜಾತಿಗೆ ಸೇರಿದ ಗಿಡಗಳನ್ನು ಬೆಳೆಸಬಹುದು. ಈ ಗಿಡಗಳು ಒಮ್ಮೆಲೆ ಹೆಚ್ಚು ನೀರು ಬಳಸಿಕೊಳ್ಳುವುದರ ಜೊತೆಗೆ, ವಾತಾವರಣದ ಉಷ್ಣತೆಯನ್ನು ಹೀರಿಕೊಳ್ಳುತ್ತವೆ. ರೋಗ ಮತ್ತು ಕೀಟಗಳ ಬಾಧೆಯೂ ಕಡಿಮೆ. ವಾರಕ್ಕೊಮ್ಮೆ ನೀರು ಹಾಕಿದರೂ ಸಾಕಾಗುತ್ತದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry